ಕ್ರಿಶ್ಚಿಯನ್ ಬಾಂಧವರಿಂದ ಗುಡ್‍ಫ್ರೈಡೆ ಆಚರಣೆ
ಕುಂದಾಪುರ:ತಾಲೂಕಿನ ತ್ರಾಸಿ ಇಗರ್ಜಿ ಹಾಗೂ ಕೊಸೆಸಾಂವ್ ಅಮ್ಮನವರ ಚರ್ಚ್ ಗಂಗೊಳ್ಳಿ,ತಲ್ಲೂರು ಚರ್ಚ್,ಪಡುಕೋಣೆ ಚರ್ಚ್ ಸೇರಿದಂತೆ ನಾನಾ ಚರ್ಚ್‍ಗಳಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ ಗುಡ್‍ಫ್ರೈಡ್ ಅನ್ನು ಶುಕ್ರವಾರ ಆಚರಿಸಲಾಯಿತು.ಕ್ರಿಶ್ಚಿಯನ್ ಬಾಂಧವರು ಚರ್ಚ್‍ಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು.ಯೇಸು ಕ್ರಿಸ್ತರ ಮರಣ ದಿನದ ಅಂಗವಾಗಿ ಉಪವಾಸವನ್ನು ಆಚರಿಸಲಾಗುತ್ತದೆ.























































































































































































































































































































































































































































































































































































































































































































































































































































































































































































































































































































































































































































































































































































































































































