ಅಡಿಕೆ ಕಳವು ಪ್ರಕರಣ, ಆರೋಪಿಗಳ ಬಂಧನ
ಕುಂದಾಪುರ:ಶಂಕರನಾರಾಯಣ ಠಾಣಾ ಪೊಲೀಸ್ ಉಪನಿರೀಕ್ಷಕರಾದ(ಕಾ.ಸು) ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಮ್.ಇ.(ತನಿಖೆ) ಮತ್ತು ಸಿಬ್ಬಂದಿಯವರು ಶಂಕರನಾರಾಯಣ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿಯಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ 1) ಅಮೀರ್ ಝನುದ್ದೀನ್, (23), ಗುಲ್ವಾಡಿ ಗ್ರಾಮ, ಕುಂದಾಪುರ, 2) ಮೊಹಮ್ಮದ್ ಮುನಾವರ್ (21),ಬಿಳಲಖಂಡ ಗ್ರಾಮ, ಭಟ್ಕಳ ತಾಲೂಕು, 3) ನಿಸಾರ್ @ ಆಸೀಫ್ ಅನ್ನಾರ್ ಪ್ರಾಯ (24), ಉಸ್ಮಾನ್ ನಗರ, , ಭಟ್ಕಳ ತಾಲೂಕು ಇವರನ್ನು ದಿನಾಂಕ: 28/03/2024 ರಂದು ದಸ್ತಗಿರಿ ಮಾಡಿ ಅವರುಗಳಿಂದ 11.25 ಕ್ವಿಂಟಾಲ್ ಸಿಪ್ಪೆ ಅಡಿಕೆ , 40 ಕೆ.ಜೆ. ಒಣ ಅಡಿಕೆ, ಮತ್ತು ಕೃತ್ಯಕ್ಕೆ ಬಳಸಿದ್ದ KA-47-9135 ನಂಬ್ರ ಪಿಕ್ಆಪ್ ವಾಹನ ಹಾಗೂ KA-20-ET-6215 ನೇ ನಂಬ್ರದ ಸ್ಕೂಟರ್ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ಮೌಲ್ಯ 4,05,750/- ರೂಪಾಯಿ ಆಗಬಹುದು. ಪ್ರಕರಣದ ಪತ್ತೆ ಕಾರ್ಯದಲ್ಲಿ ನಾಸೀರ್ ಹುಸೇನ್ ಪಿಎಸ್ಐ (ಕಾ.ಸು) ಮತ್ತು ಶಂಭುಲಿಂಗಯ್ಯ ಎಮ್.ಇ. ಪಿಎಸ್ಐ (ತನಿಖೆ) ಶಂಕರನಾರಾಯಣ ಠಾಣೆ, ಸಿಬ್ಬಂದಿಗಳಾದ ಪುನೀತ್ ಕುಮಾರ್, ಸಚಿನ್, ಲೋಹಿತ್ ಕುಮಾರ್, ಮೌನೇಶ್, ರಾಕೇಶ್, ಪ್ರಕಾಶ್, ರಾಘವೇಂದ್ರ, ಮಂಜುನಾಥ್ ಭಾಗವಹಿಸಿದ್ದಾರೆ