ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗ,ವಿಜ್ಞಾನಿಗಳ ತಂಡ ಭೇಟಿ
ಕುಂದಾಪುರ:ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರು ಹಾಗೂ ಮುವತ್ತುಮುಡಿ ಭಾಗದಲ್ಲಿ ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗ ಬಾಧೆಯನ್ನು ಅಧ್ಯಾಯನವನ್ನು ಮಾಡಲು ವಿಜ್ಞಾನಿಗಳ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ತೆಂಗು ಬೆಳೆಗಾರ ರೈತರೊಂದಿಗೆ ಚರ್ಚಿಸಿದರು.
ಪ್ರೆÇ.ಡಾ.ರೇವಣ್ಣ ರೇವಣ್ಣನವರ್ (ಝೆಎಹೆಚ್‍ಆರ್‍ಎಸ್),ಸಾಹಾಯಕ ಪ್ರಾಧ್ಯಾಪಕ ಡಾ.ಮೋಹನ ಕುಮಾರ್ (ಝೆಎಹೆಚ್‍ಆರ್‍ಎಸ್),ಹಿರಿಯ ಎಡಿ ತೋಟಗಾರಿಕೆ ನಿಧೀಶ ಕೆ.ಜೆ ಹಾಗೂ ರೈತರಾದ ಚಂದ್ರ ಪೂಜಾರಿ ಕನ್ನಡ ಕುದ್ರು,ಜೈಸನ್ ಪಿಂಟೊ ಉಪಸ್ಥಿತರಿದ್ದರು.
ಮರಗಳಿಗೆ ತಗುಲಿದ ರೋಗವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳ ತಂಡ ಕಪ್ಪು ತಲೆ ಗರಿತಿನ್ನುವ ಹುಳು ಬಾಧೆಯಿಂದ ತೆಂಗಿನ ಮರಗಳು ರೋಗ ಬಾಧೆಗೆ ತುತ್ತಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಮೂಲತಃ ದಕ್ಷಿಣ ಏಷ್ಯಾ ದೇಶಗಳಲ್ಲಿ ಕಂಡು ಬರುವ ಕಪ್ಪು ತಲೆ ಗರಿತಿನ್ನುವ ಹುಳು ಕೇರಳ ಮುಖಾಂತರ ದಕ್ಷಿಣ ಭಾರತಕ್ಕೆ ಪ್ರವೇಶ ಮಾಡಿದೆ.ಬೇಸಿಗೆಯಲ್ಲಿ ಹೆಚ್ಚಾಗಿ ತೆಂಗಿನ ಮರಗಳು ಹುಳು ಬಾಧೆಯಿಂದ ರೋಗಕ್ಕೆ ತುತ್ತಾಗುತ್ತವೆ.ಹೆಚ್ಚು ಬಿಸಿಲು,ಸೆಖೆ,ನೀರಿನ ಕೊರತೆ ಹಾಗೂ ಪೆÇಷಕಾಂಶದ ಕೊರತೆಯಿಂದ ಬಳಲುತ್ತಿರುವ ಮರಗಳು ಕಪ್ಪು ತಲೆಗರಿತಿನ್ನುವ ಹುಳ ಬಾಧೆಗೆ ಬಲಿಯಾಗುತ್ತವೆ ಎಂದು ಡಾ.ರೇವಣ್ಣ ರೇವಣ್ಣನವರ್ ಅವರು ರೈತರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಬೆಳಕಿನ ಆಕರ್ಷಕ ಬಲೆ ಅಳವಡಿಕೆಗೆ ಕ್ರಮ:ತೆಂಗಿನ ಮರಕ್ಕೆ ತಗುಲಿದ ಹುಳ ಬಾಧೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪ್ರಾಥಮಿಕ ಹಂತದಲ್ಲಿ ಬೆಳಕಿನ ಆಕರ್ಷಕ ಬಲೆ ಅಳವಡಿಕೆಯನ್ನು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.