ಹೆಮ್ಮಾಡಿ:ರೋಗ ಬಾಧೆಯಿಂದ ತೆಂಗು ಬೆಳೆ ತತ್ತರ

Share

Advertisement
Advertisement

ಕುಂದಾಪುರ:ತಾಲೂಕಿನ ಕನ್ನಡ ಕುದ್ರು ಹಾಗೂ ಮುವತ್ತು ಮುಡಿ ಭಾಗದಲ್ಲಿ ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗದಿಂದ ತೆಂಗಿನ ಗರಿಗಳು ಸುಳಿ ತನಕ ಕೆಂಪಾಗಿ ಕರಟಿ ಹೋಗಿದೆ.5 ರಿಂದ 6 ಸಾವಿರಕ್ಕೂ ಅಧಿಕ ತೆಂಗಿನ ಮರಗಳು ರೋಗ ಬಾಧೆಯಿಂದ ತತ್ತರಿಸಿದ್ದು ರೈತರು ಆತಂಕಿತರಾಗಿದ್ದಾರೆ.ತೆಂಗಿನ ಮರಕ್ಕೆ ಅಂಟಿಕೊಂಡಿದ್ದ ರೋಗ ಬಾಧೆಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳ ಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರದ ಗರಿಗಳು ಇದ್ದಕ್ಕಿದಂತೆ ಸುಳಿ ತನಕ ಕೆಂಪಾಗಿ ಕರಟಿ ಒಣಗಿ ಜೊತು ಬೀಳುತ್ತಿದೆ.ತೆಂಗಿನ ಮರದಲ್ಲಿ ಹಸಿರಿನ ಅಂಶವೆ ಮಾಯವಾಗಿದೆ.ಹೊಸ ಗರಿಗಳು ಬೀಡುತ್ತಿಲ್ಲ,ಕೊನೆಗಳು ಕಣ್ಮರೆಯಾಗಿದೆ.ತೆಂಗಿನ ಮರಕ್ಕೆ ತಗುಲಿದ ರೋಗ ಬಾಧೆಯಿಂದ ರೈತರು ಹತಾಶರಾಗಿದ್ದು ಏನು ಮಾಡದಂತಹ ಪರಿಸ್ಥಿತಿಯಲ್ಲಿ ಇದ್ದಾರೆ.ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಬೇಕ್ಕೆನ್ನುವುದು ತೆಂಗು ಬೆಳೆಗಾರರ ಆಗ್ರಹ.
ರೋಗವು ಇಡಿ ತೋಟಕ್ಕೆ ಹಬ್ಬಿದ್ದರಿಂದ ಆರೋಗ್ಯವಂತ ತೆಂಗಿನ ಮರಗಳನ್ನು ನೋಡಲು ಅಸಾಧ್ಯವಾಗಿದೆ ಗುಂಪು ಗುಂಪಾಗಿ ತೆಂಗಿನ ಮರಗಳು ರೋಗಕ್ಕೆ ತುತ್ತಾಗುತ್ತಿವೆ.ತೆಂಗಿನ ಮರದಲ್ಲಿ ಫಸಲು ಮಾಯವಾಗಿದೆ.ತೆಂಗಿನ ಮರಕ್ಕೆ ರೋಗ ತಗುಲಿ 6 ತಿಂಗಗಳು ಕಳೆದಿದೆ.ರೈತರ ಗೊಳನ್ನು ಕೇಳುವವರು ಯಾರು ಇಲ್ಲದಂತಾಗಿದೆ.ಮಾಹಿತಿ ಕೊರತೆಯಿಂದ ರೈತರು ಕೈಕಟ್ಟಿ ಕುಳಿತ್ತಿದ್ದಾರೆ.ತೆಂಗಿನ ಮರಕ್ಕೆ ಹರಡಿದ ರೋಗವನ್ನು ನಿಯಂತ್ರಣಕ್ಕೆ ತರದೆ ಹೋದಲ್ಲಿ ಊರಿಂದ ಊರಿಗೆ ಪಸರಿಸುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಾರೆ.
ಸುತ್ತಲೂ ಉಪ್ಪು ನೀರು ನೀರಿನಿಂದ ಆವೃತ್ತವಾಗಿರುವ ಕನ್ನಡ ಕುದ್ರು ಹಾಗೂ ಮುವತ್ತು ಮುಡಿ ಭಾಗದ ರೈತರಿಗೆ ತೆಂಗಿನ ಬೆಳೆ ಜೀವನಾಧಾರ.ಗದ್ದೆಗಳು ಉಪ್ಪು ನೀರು ನೀರಿನಲ್ಲಿ ಮುಳುಗಿ ಏಳುತ್ತಿದ್ದರಿಂದ ಭತ್ತದ ಕೃಷಿಯನ್ನು ಕೈ ಬಿಟ್ಟಿದ್ದ ಅಲ್ಲಿನ ಜನರು ತೆಂಗಿನ ಬೆಳೆಯನ್ನು ಪ್ರಮುಖ ಬೆಳೆಯನ್ನಾಗಿ ನೆಚ್ಚಿಕೊಂಡಿದ್ದಾರೆ.ಸರಿ ಸುಮಾರು ಒಬ್ಬ ರೈತ ಕಾಯಿ ಕೊಯ್ಲು ಸಮಯದಲ್ಲಿ 2 ರಿಂದ 1,500 ತನಕ ಕಾಯಿಯನ್ನು ಕೊಯ್ಲು ಮಾಡುತ್ತಿದ್ದರು.ತೆಂಗಿನ ಮರಗಳು ರೋಗಕ್ಕೆ ತುತ್ತಾಗಿದ್ದರಿಂದ 100 ಕಾಯಿ ಸಿಗುವುದು ಕಷ್ಟ ಎಂದು ರೈತರು ತಮ್ಮ ಅಳನ್ನು ತೊಡಿಕೊಂಡಿದ್ದಾರೆ.

Advertisement

ಕನ್ನಡ ಕುದ್ರು ಹಾಗೂ ಮುವತ್ತು ಮುಡಿ ಭಾಗದಲ್ಲಿ ಹೆಚ್ಚು ಕಮ್ಮಿ 5 ರಿಂದ 6 ಸಾವಿರಕ್ಕೂ ಅಧಿಕ ತೆಂಗಿನ ಮರಗಳು ರೋಗ ಬಾಧೆಗೆ ತುತ್ತಾಗಿವೆ.ತೆಂಗಿನ ಬೆಳೆ ನಮ್ಮಗೆ ಜೀವನಾಧಾರ.ಬೇಸಾಯ ಮಾಡಲು ಉಪ್ಪು ನೀರು ನೀರಿನ ಹಾವಳಿ.ತೆಂಗು ಬೆಳೆ ನಷ್ಟದಿಂದ ನಮ್ಮ ಜೀವನ ಕಷ್ಟಕ್ಕೆ ಸಿಲುಕಿದೆ.ತೆಂಗು ಬೆಳೆಗಾರ ರೈತರಿಗೆ ಪರಿಹಾರ ನೀಡಲು ಸರಕಾರ ಮತ್ತು ಇಲಾಖೆ ಕ್ರಮ ಕೈಗೊಳ್ಳಬೇಕು.ತೆಂಗಿನ ಮರಕ್ಕೆ ತಗುಲಿದ ರೋಗವನ್ನು ಹತೋಟಿಗೆ ತರಲು ಕೂಡಲೆ ಇಲಾಖೆ ಕ್ರಮ ವಹಿಸಬೇಕು.
-ಚಂದ್ರ ಪೂಜಾರಿ ಕನ್ನಡ ಕುದ್ರು,ಹೆಮ್ಮಾಡಿ,ತೆಂಗು ಬೆಳೆಗಾರರು

Advertisement
Advertisement


Share

Leave a comment

Your email address will not be published. Required fields are marked *

You cannot copy content of this page