ಮಾ.27 ರಂದು ಶ್ರೀ ಮಹಾಗಣಪತಿ ದೇವಸ್ಥಾನ ಹರ್ಕೂರು,ಬ್ರಹ್ಮಕಲಶೋತ್ಸವ,ಪುನರ್ ಪ್ರತಿಷ್ಠೆ

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ,ಬ್ರಹ್ಮಕಲಶೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾ.26 ರಿಂದ ಮಾ.28 ವರಗೆ ನಡೆಯಲಿದೆ.ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ
ಮಾ.25 ರಂದು ಶ್ರೀದೇವರ ಬೆಳ್ಳಿ ಪ್ರಭಾವಳಿ ವೈಭವದ ಮೆರವಣಿಗೆ ಜರುಗಲಿದೆ.
ಮಾ.26 ರಂದು ಮಂಗಳವಾರ ಶ್ರೀ ಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಶಿಲಾಮಯ ದೇಗುಲ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.ಮಾ.27 ರಂದು ಬುಧವಾರ ಬೆಳಿಗ್ಗೆ 8 ಘಂಟೆಗೆ ಪೀಠ ಪ್ರಿತಿಷ್ಠೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಗಳೊಂದಿಗೆ ಆರಂಭಗೊಂಡು.ಬೆಳಿಗ್ಗೆ 10.35 ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.ಮಹಾಪೂಜೆ ಪ್ರಸಾದ ವಿತರಣೆ ನಡಯಲಿದೆ.ಮಾ.28 ರಂದು ಶ್ರೀದೇವರ ಬ್ರಹ್ಮಕಲಶಾಭಿಷೇಕ ಜರುಗಲಿದೆ,ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.











































































































































































































































































































































































































































































































































































































































































































































































































































































































































































































































































































































































































































































































































































































































































