ಲೋಕಸಭಾ ಚುನಾವಣೆ ದಿನಾಂಕ ಘೋಷಣೆ,ಏಳು ಹಂತದಲ್ಲಿ ಮತದಾನ
ಬೆಂಗಳೂರು:ಲೋಕಸಭಾ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ.ಒಟ್ಟು ಏಳು ಹಂತದಲ್ಲಿ ಮತದಾನದ ಪ್ರಕ್ರಿಯೆ ನಡೆಯಲಿದೆ.ವಿಶ್ವದ ಅತ್ಯಂತ ದೊಡ್ಡ ಚುನಾವಣೆ ಇದ್ದಾಗಿದ್ದು,ಪಾದಾರಕ್ಷಕವಾಗಿ ಚುನಾವಣೆಯನ್ನು ನಡೆಸಲು ಕೇಂದ್ರ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಾರ್ನಾಟಕದಲ್ಲಿ ನಡೆಯಲಿದೆ ಎರಡು ಹಂತದಲ್ಲಿ ಮತದಾನ:ಬಹು ನಿರೀಕ್ಷಿತ ಲೋಕಸಭಾ ಚುನಾವಣೆ ವೆಳಾಪಟ್ಟಿ ಬಿಡುಗಡೆ ಆಗಿದ್ದು ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.ಮೊದಲ ಹಂತವಾಗಿ ಏಪ್ರಿಲ್-26 ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆದರೆ,ಮೇ.07 ರಂದು ಎರಡನೇ ಹಂತದ ಮತದಾನ ನಡೆಯಲಿದೆ.ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.ಜೂನ್.04 ರಂದು ಫಲಿತಾಂಶ ಹೊರಬೀಳಲಿದೆ.
ಏಪ್ರಿಲ್ 19 ರಿಂದ ಎಲೆಕ್ಷನ್ ಆರಂಭ:-ಏಪ್ರಿಲ್ 19 ರಿಂದ ಜೂ.01 ರ ವರೆಗೆ ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.