ಕಟ್ಟಕಡೆಯ ಮೀನುಗಾರರ ಕಣ್ಣಿರನ್ನು ಒರೆಸುವುದು ನಮ್ಮ ಸರಕಾರದ ಗುರಿ-ಮಂಕಾಳ ವೈದ್ಯ

Share

Advertisement
Advertisement

ಕುಂದಾಪುರ:ಯಾರು ನಿರೀಕ್ಷಿಸದ ರೀತಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಮನಸ್ಸಿಗೆ ಬಹಳಷ್ಟು ನೋವಾಗಿದೆ.ಬೋಟ್ ಮತ್ತು ದೋಣಿಯನ್ನು ಕಳೆದು ಕೊಂಡವರ ನೋವು ತಮ್ಮ ವಾಸದ ಮನೆಯನ್ನೆ ಕಳೆದುಕೊಂಡಷ್ಟು ಇರುತ್ತದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರರ ನೋವಿಗೆ ಸ್ಪಂದನೆ ಮಾಡುವುದು ನಮ್ಮ ಸರಕಾರದ ಆದ್ಯ ಕರ್ತವ್ಯ ಕೂಡ ಆಗಿತ್ತು.ಕಟ್ಟಕಡೆಯ ಮೀನುಗಾರರ ಕಣ್ಣಿರನ್ನು ಒರೆಸುವ ನಿಟ್ಟಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ನೀಡಿದ್ದು.ಕೆಲವೊಂದು ತಾಂತ್ರಿಕ ಕಾರಣಗಳಿಂದ ಪರಿಹಾರವನ್ನು ನೀಡುವಲ್ಲಿ ವಿಳಂಬವಾಗಿದೆ ಎಂದು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಕರ್ನಾಟಕ ಸರಕಾರ,ಮೀನುಗಾರಿಕೆ ಇಲಾಖೆ ವತಿಯಿಂದ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಕೆ ಬಂದರಿನಲ್ಲಿ ಭಾನುವಾರ ನಡೆದ ಸಂತ್ರಸ್ತ ಮೀನುಗಾರರಿಗೆ ಪರಿಹಾರ ವಿತರಣೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಮಾತನಾಡಿ,ಸಮುದ್ರದ ಸಂಪತ್ತನ್ನು ನೋಡಿ ಬದುಕನ್ನು ಕಟ್ಟಿಕೊಂಡವರು ಮೀನುಗಾರರು ಮೀನುಗಾರಿಕೆ ಎನ್ನುವುದು ಅವರ ಜೀವನದ ಅಂಗವಾಗಿದೆ.ಕರಾವಳಿ ಭಾಗದ ಆರ್ಥಿಕ ಚೈತನ್ಯದ ಮೂಲವಾಗಿರುವ ಮೀನುಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ರಾಜ್ಯ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳು ಮೀನುಗಾರರ ಮನೆ ಬಾಗಿಲಿಗೆ ಮುಟ್ಟುವಂತೆ ಆಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ,ಇನ್ಸುರೆನ್ಸ್ ಮಾಡಿಕೊಳ್ಳುವುದರಿಂದ ದುರಂತದ ಸಮಯದಲ್ಲಿ ಹೆಚ್ಚಿನ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ.ಕೇಂದ್ರ ಸರಕಾರ ಸಾಮೂಹಿಕ ಜನತಾ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ ಇದನ್ನು ಎಲ್ಲರೂ ಬಳಸಿಕೊಳ್ಳುವಂತೆ ಆಗಬೇಕು ಎಂದರು.ಸಮುದ್ರ ಮತ್ತು ಬಂದರು ಭಾಗದಲ್ಲಿ ವಾಸಿಸುವ ಮೀನುಗಾರರಿಗೆ 94.ಸಿ ಅಡಿಯಲ್ಲಿ ಮನೆ ಕಟ್ಟಿಕೊಳ್ಳುವಂತೆ ಕಾನೂನು ಜಾರಿಗೆ ತರಲು ಕ್ರಮಕೈಗೊಳ್ಳುವಂತೆ ಸಚಿವರಲ್ಲಿ ವಿನಂತಿಸಿದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ,ಸಂಕಷ್ಟ ಮೀನುಗಾರರ ಸಮಿತಿ ಸದಸ್ಯ ಮದನ್ ಕುಮಾರ್,ವ್ಯವಸ್ಥಾಪಕ ನಿರ್ದೇಶಕ ಗಣೇಶ.ಕೆ,ಹಸಿಮೀನಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜನಾರ್ದನ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ನಾಡದೋಣಿ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ,ಆನಂದ ಖಾರ್ವಿ,ಸೌಪರ್ಣಿಕಾ ಬಸವ ಖಾರ್ವಿ,ವೆಂಕರಮಣ ಖಾರ್ವಿ,ಮೀನುಗಾರಿಕೆ ಉಪ ನಿರ್ದೇಶಕಿ ಅಚಿಜನಾದೇವಿ,ಸಹಾಯಕ ನಿರ್ದೇಶಕಿ ಕುಂದಾಪುರ ಸುಮಲತಾ,ಉಪ ನಿರ್ದೇಶಕ ಗಂಗೊಳ್ಳಿ ಬಂದರು ಸಂಜೀವ ಅರಕೇರಿ

Advertisement
Advertisement


Share

Leave a comment

Your email address will not be published. Required fields are marked *

You cannot copy content of this page