ನ್ಯಾಷನಲ್ ಕ್ರಿಯೇಟರ್ ಪ್ರಶಸ್ತಿ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ:ಯೂಟ್ಯೂಬ್,ಇನ್ಸ್ಟ್ರಾಗ್ರಾಮನಲ್ಲಿ ಜನಪ್ರಿಯತೆ ಗಳಿಸಿದವರಿಗೆ ಇದೆ ಮೊದಲ ಬಾರಿಗೆ
ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ್ಯಾಷನಲ್ ಕ್ರಿಯೇಟರ್ ಪ್ರಶಸ್ತಿ ನೀಡಿ ಗೌರವಿಸಿದರು.ರಾಜ್ಯದ ಪ್ರಖ್ಯಾತ ಆರ್‌ಜೆ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಕರಾವಳಿ ಮೂಲದ’ ಅಯ್ಯೋ ಶ್ರದ್ಧಾ’ ಎಂದೇ ಫೇಮಸ್ ಆಗಿರುವ ಶ್ರದ್ಧಾ ಜೈನ್ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್ ಎನ್ನುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಬುವಾವಾ ಎಂದೇ ಪ್ರಸಿದ್ಧರಾಗಿರುವ ಆರ್‌ಜೆ ರೌನಕ್‌ಗೆ ಈ ಪ್ರಶಸ್ತಿ ನೀಡಲಾಗಿದೆ.ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಜನಪರ ಕಂಟೆಂಟ್‌ಗಳ ಮೂಲಕ ಪ್ರಖ್ಯಾತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ವಿತರಣೆ ಮಾಡಿದ್ದು ವಿಶೇಷ ಸಂಗತಿ ಆಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ,ಮುಂದಿನ ಲೋಕಸಭೆ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಕೆಲವರು ಹೇಳ್ತಾರೆ. ಆದರೆ, ಮುಂದಿನ ವರ್ಷ ಶಿವರಾತ್ರಿಗೂ ನಾನೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದೇನೆ. ಇದು ಮೋದಿ ಗ್ಯಾರಂಟಿ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು.ಇಡೀ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅತ್ಯಂತ ಮನರಂಜನಾತ್ಮಕವಾಗಿದ್ದರು. . ಹೆಚ್ಚಿನ ಎಲ್ಲಾ ಕಂಟೆಂಟ್ ಕ್ರಿಯೆಟರ್‌ಗಳು ವೇದಿಕೆಗೆ ಬರುವಾಗ ಅವರ ಕಾರ್ಯಕ್ರಮದ ವಿಶೇಷತೆಗಳನ್ನು ಮೋದಿ ಹೇಳುತ್ತಿದ್ದರು. ಅದರೊಂದಿಗೆ ತಾವು ಸ್ಪೂರ್ತಿದಾಯಕ ಅಂಶಗಳಿರುವ ಕಂಟೆಂಟ್‌ಗಳನ್ನೇ ಇಷ್ಟಪಡುವುದಾಗಿ ತಿಳಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































