ವಿಶ್ವ ಮಹಿಳಾ ದಿನಾಚರಣೆ,ಗೌರವ ಶಿಕ್ಷಕಿಯರಿಗೆ ಸನ್ಮಾನ
ಕುಂದಾಪುರ:ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆ ಗೌರವ ಶಿಕ್ಷಕಿಯರಾದ ಪವಿತ್ರಾ ಮತ್ತು ಸುಜಾತ ಅವರನ್ನು ಸನ್ಮಾನಿಸಲಾಯಿತು.
ನಾವುಂದ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ,ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು,ನಾವುಂದ ಕ್ಲಬ್ಬಿನ ಅಧ್ಯಕ್ಷ ಪ್ರದೀಪ್ ಶೆಟ್ಟಿ,ಕಾರ್ಯದರ್ಶಿ ಅಶೋಕ ಆಚಾರ್ಯ,ಮುಖ್ಯ ಶಿಕ್ಷಕಿ ಲಲಿತಾ,ಶಿಕ್ಷಕವೃಂದವರು ಉಪಸ್ಥಿತರಿದ್ದರು.ಶಿಕ್ಷಕ ಸುನೀಲ್ ಶೆಟ್ಟಿ ಸ್ವಾಗತಿಸಿ,ನಿರ್ವಹಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































