ಮರವಂತೆ:ಬೆಳ್ಳಿ ರಥ ಲೋಕಾರ್ಪಣೆ ಮನವಿ ಪತ್ರ ಬಿಡುಗಡೆ


ಕುಂದಾಪುರ:ಸಹಸ್ರಾರು ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿದ್ದ ಬೆಳ್ಳಿ ರಥ ಅನಾದಿ ಕಾಲದಲ್ಲಿ ಸಮುದ್ರದಲ್ಲಿ ಹುದುಗಿದೆ ಎನ್ನುವ ವಿಷಯ ಪ್ರಶ್ನಾ ಚಿಂತನೆಯಲ್ಲಿ ಮೂಡಿ ಬಂದಿದೆ.ಆ ನಿಟ್ಟಿನಲ್ಲಿ ಶ್ರೀದೇವರಿಗೆ ಬೆಳ್ಳಿ ರಥವನ್ನು ಸಮರ್ಪಣೆ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್.ಎಂ ನಾಯಕ್ ಹೇಳಿದರು.ಬೈಂದೂರು ತಾಲೂಕಿನ ಮರವಂತೆ ಶ್ರೀಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಸೋಮವಾರ ಬೆಳ್ಳಿ ರಥ ಲೋಕಾರ್ಪಣೆ ಮನವಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಶ್ರೀದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿ ರಥ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ.ರೂ ಅಧಿಕ ಹಣ ತಗುಲಲಿದೆ.ಇವೊಂದು ದೇವತಾ ಕಾರ್ಯಕ್ಕೆ ದಾನಿಗಳು,ಭಕ್ತಾಧಿಗಳು,ಗ್ರಾಮಸ್ಥರು ಸಹಕರಿಸಬೇಕೆಂದು ಕೇಳಿಕೊಂಡರು.ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ,ಮೀನುಗಾರ ಮುಖಂಡರಾದ ಚಂದ್ರ ಖಾರ್ವಿ ಮರವಂತೆ,ವೆಂಕಟರಮಣ ಖಾರ್ವಿ,ಸಮಿತಿ ಸದಸ್ಯರಾದ ಗಣೇಶ ಖಾರ್ವಿ,ಪ್ರಕಾಶ,ಶೋಭಾ ದೇವಾಡಿಗ,ಗ್ರಾಮಸ್ಥರು,ದೇವಳದ ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































