ಆಲೂರು ಶಾಲೆ ವಿದ್ಯಾರ್ಥಿಗಳು,ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ:ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಎಚ್‍ಸಿಎಲ್ ಫೌಂಡೇಶನ್ ವತಿಯಿಂದ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆ ವಿದ್ಯಾರ್ಥಿಗಳಾದ ನಿತೇಶ್.ಜೆ ಮತ್ತು ನಿಧಿಶ್ರೀ ಅವರು ಟ್ರಯಥ್ಲಾನ್ (60.ಮೀ ಓಟ,ಉದ್ದ ಜಿಗಿತ,ಬಾಲ್ ಥ್ರೋ) ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.600.ಮೀ ಓಟದಲ್ಲಿ ಪ್ರಣಮ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































