ಆಲೂರು:ವಿಜ್ಞಾನ ಮತ್ತು ಕಲಾ ಮೇಳ ಉದ್ಘಾಟನೆ

Share

ಕುಂದಾಪುರ:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕುಂದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ಮೇಳ ಕಾರ್ಯಕ್ರಮ ಬುಧವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ಎನ್ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ,ರವಿ ಶೆಟ್ಟಿ,ಎಸ್‍ಡಿಎಂಸಿ ಅಧ್ಯಕ್ಷ ದತ್ತಾತ್ರೇಯ ಭಟ್,ಪ್ರೌಢ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಉದಯ ಕುಮಾರ್ ಶೆಟ್ಟಿ,ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವಿಜ್ಞಾನ ರಂಗೋಲಿ,ಕಾರ್ಯ ನಿರ್ವಹಣಾ ಮಾದರಿಗಳು,ವಿಜ್ಞಾನ ಚಿತ್ರಗಳು ಮತ್ತು ಕಲಾ ಪ್ರದರ್ಶನ ಜರುಗಿತು.ಲಲಿತಾ ಸ್ವಾಗತಿಸಿದರು.ವಿಜ್ಞಾನ ಶಿಕ್ಷಕಿ ವಿದ್ಯಾ ಪ್ರತಿಜ್ಞಾವಿಧಿ ಬೋಧಿಸಿದರು.ಸಹಶಿಕ್ಷಕ ದಿನಕರ ನಿರ್ವಹಿಸಿದರು.ಶಿಕ್ಷಕರಾದ ವಿಶ್ವನಾಥ,ವಿದ್ಯಾಗೌಡ,ಸುನಂದ,ಆಶಾರಾಣಿ,ಕಂಪ್ಯÇಟರ್ ಶಿಕ್ಷಕಿ ದೀಪಾ ಸಹಕರಿಸಿದರು.ದೈಹಿಕ ಶಿಕ್ಷಕ ವೀರೇಂದ್ರ ಜೋಗಿ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page