ಅರಾಟೆಯಲ್ಲಿ ಭೀಕರ ಅಪಘಾತ ಬ್ಯಾಂಕ್ ಮ್ಯಾನೇಜರ್ ಸಾವು

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಾಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆನರಾ ಬ್ಯಾಂಕ್ ಮರವಂತೆ ಶಾಖೆ ಮ್ಯಾನೇಜರ್ ಮುಂಬಯಿ ಮೂಲದ ನಿವಾಸಿ ರಾಹುಲ್ ಬಾಲಕೃಷ್ಣ ರಂಖಬ್ಮೆ ಎನ್ನುವ ವ್ಯಕ್ತಿ ಶನಿವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಬೈಂದೂರು ಕಡೆಯಿಂದ ಕುಂದಾಪುರ ಕಡೆಯಿಂದ ಸಾಗುತ್ತಿದ್ದ ಕೇರಳ ನೋಂದಣಿ ಹೊಂದಿರುವ ಲಾರಿ ಅರಾಟೆ ಬಳಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬೈಕ್ ಸವಾರ ಬ್ಯಾಂಕ್ ಉದ್ಯೋಗಿ ರಾಹುಲ್ ಬಾಲಕೃಷ್ಣ ರಂಖಬ್ಮೆ ಅವರು ಸಾವನ್ನಪ್ಪಿದ್ದಾರೆ.ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಉತ್ತಮ ಸೇವೆ ನೀಡುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.



ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.ಗಾಡಿಯನ್ನು ಅಡ್ಡಗಟ್ಟಲು ಸ್ಥಳೀಯರು ಬೈನ್ನಟ್ಟಿ ಹೋದ ಸಮಯದಲ್ಲಿ ಲಾರಿ ಚಾಲಕ ತನ್ನ ಲಾರಿಯನ್ನು ಹೆಮ್ಮಾಡಿ ಪೇಟೆಯೊಳಗೆ ನುಗ್ಗಿಸಿ ಪುನಃ ಬೈಂದೂರು ಕಡೆಗೆ ಸಾಗುವ ರಸ್ತೆಯಲ್ಲಿ ಸಾಗಿ ಬಂದು ಮುಳ್ಳಿಕಟ್ಟೆ ಡಿವೈಡರ್ ಒಳಗೆ ರಾಂಗ್ ಸೈಡ್‍ನಲ್ಲಿ ತನ್ನ ಗಾಡಿಯನ್ನು ನುಗ್ಗಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ರಾಷ್ಟ್ರೀಯ ಹೆದ್ದಾರಿ ಚರಂಡಿ ಯೊಳಗೆ ಸಿಲುಕೊಂಡಿದೆ.ಪರಿಣಾಮ ಲಾರಿ ಮುಂದೆ ಚಲಿಸದೆ ಸಿಕ್ಕಿ ಹಾಕಿ ಕೊಂಡಿತ್ತು.ಕ್ರೈನ್ ಮೂಲಕ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು.ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.ಇಬ್ರಾಹಿಂ ಗಂಗೊಳ್ಳಿ ಅವರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆ ಸಾಗಿಸಲು ಸಹಕರಿಸಿದರು.