ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮ
ಕುಂದಾಪುರ:ಸಮಾಜದಲ್ಲಿ ಕಡೆಗಣಿಸಿದಂತಹ ಜನರನ್ನು ಸಾಮಾಜಿಕ,ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸೂಕ್ತವಾದ ತರಬೇತಿ ನೀಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಹ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ ಎಂದು ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೈಂದೂರು,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ ವತಿಯಿಂದ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಶನಿವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆದ್ಯಾತ್ಮಿಕ ಚಿಂತಕಿ ಶಯದೇವಿಸುತೆ ಮರವಂತೆ ಧಾರ್ಮಿಕ ಪ್ರವಚನ ನೀಡಿದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ತ್ರಾಸಿ ವಲಯದ ಅಧ್ಯಕ್ಷ ಸದಾನಂದ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಧ.ಗ್ರಾ.ಯೋಜನೆ ನಿರ್ದೇಶಕ ಮಹೇಶ್ ಎಮ್.ಡಿ,ಶಿವಾನಂದ ಆಚಾರ್ಯ,ಜನಜಾಗೃತಿ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷ ಸುಧಾಕರ ಆಚಾರ್ಯ,ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಶಿರೂರು,ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ ಶಿರೂರು,ತ್ರಾಸಿ ವಲಯಾಧ್ಯಕ್ಷೆ ಪ್ರಮೀಳಾ ಗಾಣಿಗ,ಶೌರ್ಯ ವಿಪತ್ತು ಘಟಕದ ಪ್ರವೀಣ ಮೊವಾಡಿ,ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷರಾದ ರಘುರಾಮ ಕೆ.ಪೂಜಾರಿ,ಕೃಷ್ಣ ಪೂಜಾರಿ,ನಾರಾಯಣ ಕೆ,ಶೇಖರ ಗುಜ್ಜಾಡಿ,ಶ್ರೀಧರ ಗಾಣಿಗ,ಕೊಲ್ಲೂರು ವಲಯದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.ಯೋಜನಾಧಿಕಾರಿ ವಿನಾಯಕ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು ಸ್ವಾಗತಿಸಿದರು.ಕೃಷಿ ಅಧಿಕಾರಿ ರಾಜು ಹಾಗೂ ವಂದನಾ ಕಾರ್ಯಕ್ರಮ ನಿರ್ವಹಿಸಿದರು.ಸೇವಾಪ್ರತಿನಿಧಿ ನಾಗರತ್ನ ವಂದಿಸಿದರು.