ನಾಡದಲ್ಲಿ ಅಪರಿಚಿತ ಶವ ಪತ್ತೆ
ಕುಂದಾಪುರ:ಬೈಂದೂರು ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡ ಗ್ರಾಮದ ನಾಡ ಗುಡ್ಡೆಅಂಗಡಿ ಸಮೀಪದ ಹಾಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ಪುರಷನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಬೈಂದೂರು ವೃತ್ತ ನಿರೀಕ್ಷಕ ಸವಿತೃ ತೇಜ್,ಗಂಗೊಳ್ಳಿ ಪಿ.ಎಸ್.ಐ ಹರೀಶ್ ಆರ್ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಹಾಯಕ ಠಾಣಾಧಿಕಾರಿ ಮಂಜುನಾಥ್,ಸಿಬ್ಬಂದಿಗಳಾದ ಶಾಂತರಾಮ್ ಶೆಟ್ಟಿ,ನಾಗರಾಜ್,ದಿನೇಶ್ ಸ್ಥಳದಲ್ಲಿ ಹಾಜರಿದ್ದರು.ಇಬ್ರಾಹಿಂ ಗಂಗೊಳ್ಳಿ,ಬಬ್ಬಾ ಗಂಗೊಳ್ಳಿ,ಸುಭಾನ್,ಪ್ರಭಾಕರ್ ನಾಡ ಶವವನ್ನು ಸಾಗಿಸಲು ಸಹಕರಿಸಿದರು.ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಶೀತಲೀಕರಣ ಘಟಕದಲ್ಲಿ ಶವವನ್ನು ಸಂರಕ್ಷಿಸಿ ಇಡಲಾಗಿದೆ.ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು ಐದರಿಂದ ಆರು ದಿನಗಳ ಹಿಂದೆ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ದುರ್ಗಮ ಹಾದಿಯಲ್ಲಿ ಶವವನ್ನು ಸಾಗಿಸಲು ಸ್ವಯಂ ಸೇವಕರು ಹರಸಾಹಸ ಪಟ್ಟರು.





















































































































































































































































































































































































































































































































































































































































































































































































































































































































































































































































































































































































































































































































































































































































































