ಹೆಜ್ಜೇನು ಗೂಡಿಗೆ ಹಿಟ್ ಆದ ಚೆಂಡು,ಆಟಗಾರರು ಕಂಗಾಲು
ಮಂಗಳೂರು:ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದೆ.ಹೆಜ್ಜೇನು ದಾಳಿಯಿಂದ ಕಂಗಾಲಾದ ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.ಭಾನುವಾರ ಒಂಬತ್ತುಕೆರೆಯ అనిల ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಆಟಗಾರರೊಬ್ಬರು ಹೊಡೆದ ಚೆಂಡು ನೇರವಾಗಿ ಹೆಜ್ಜೇನು ಗೂಡು ಕಟ್ಟಿದ್ದ ತೆಂಗಿನ ಮರಕ್ಕೆ ತಾಗಿದೆ.ಪರಿಣಾಮ ಕ್ರಿಕೆಟ್ ಮೈದಾನಕ್ಕೆ ದಾಳಿ ಇಟ್ಟ ಹೆಜ್ಜೇನು ನೊಣಗಳು ಆಟಗಾರರ ಮೇಲೆ ದಾಳಿ ಮಾಡಿದೆ.ಹೆಜ್ಜೇನು ದಾಳಿಯಿಂದ ರಕ್ಷಿಸಿಕೊಳ್ಳಲು ಯುವಕರು ಅವರು ಮೈದಾನವಿಡೀ ಓಡಾಡಿದ್ದಾರೆ.ಅಸಂಖ್ಯ ಸಂಖ್ಯೆ ಯಲ್ಲಿ ಕಾಣಿಸಿಕೊಂಡ ಹೆಜ್ಜೇನು ಹುಳುಗಳು ಮೈದಾನ ಸೂತ್ತಲು ಆವರಿಸಿ ಅಲ್ಲಿದ್ದವರ ಮೇಲೆ ದಾಳಿ ನಡೆಸಿದೆ,ಈ ಕಾರಣದಿಂದ ಕ್ರಿಕೆಟ್ ಟೂರ್ನಿಯೇ ರದ್ದುಗೊಂಡಿದೆ. ಆಟಗಾರರು ಯಾರೋ ಬೆನ್ನತ್ತಿಕೊಂಡು ಬಂದ ರೀತಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಿದ್ದು ಬಳಿಕ ಜಾಗವನ್ನೇ ಖಾಲಿ ಮಾಡಿದ್ದಾರೆ.