ತ್ರಾಸಿ:ಅಪರಿಚಿತ ಗಂಡಸಿನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಕಂಚುಗೋಡು ಸಮೀಪ ಕಡಲ ತೀರದ ಬಳಿ ಅಂದಾಜು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಭಾನುವಾರ ಪತ್ತೆಯಾಗಿದೆ.
ಗಂಗೊಳ್ಳಿ ಠಾಣೆ ಪಿಎಸ್‍ಐ ಗುಪ್ತಚರ ವಿಭಾಗ ಬಸವ ಕನಟ್ಟಿ,ಕರಾವಳಿ ನಿಯಂತ್ರಣ ದಳ ಸಿಬ್ಬಂದಿ ನಿಶಾಂತ ಖಾರ್ವಿ,ಹೆಡ್ ಕಾನ್ಸ್ಟೇಬಲ್ ನಾಗರಾಜ ನಾಯಕವಾಡಿ,ಮಾಳಿಂಗರಾಯ ಸ್ಥಳದಲ್ಲಿ ಹಾಜರಿದ್ದರು.ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ,ಕೃಷ್ಣ,ಕಿಟ್ಟ,ಅಕ್ಷಯ್ ಖಾರ್ವಿ ಅವರು ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































