ಮರವಂತೆ:ವಾರ್ಷಿಕೋತ್ಸವ ಸಂಭ್ರಮಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಯುವ ನವ ಗೆಳೆಯರ ಬಳಗ ನೀರೋಣಿ ಮರವಂತೆ ಅದರ ಮೂರನೇ ವರ್ಷದ ವಾರ್ಷಿಕೀತ್ಸವ ಸಂಭ್ರಮಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮರವಂತೆಯಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಂಗೋಲಿ ಕಲಾವಿದೆ ಸಂಶೋಧಕರಾದ ಭಾರತಿ ಮರವಂತೆ ಉದ್ಘಾಟಿಸಿದರು,ಮಾಜಿ ತಾ.ಪಂ ಸದಸ್ಯ ಹಕ್ಕಾಡಿ ಜಗದೀಶ್ ಪೂಜಾರಿ,ಶಿಕ್ಷಕಿ ಎನ್.ಸಿಂಗಾರಿ,ಮಹಿಳಾ ಮೀನುಗಾರರ ವಿವಿಧೋದ್ಧೇಶ ಸಹಕಾರ ಸಂಘ ಮರವಂತೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶ್ರೀನಿವಾಸ ಅಡಿಗ ಕಬ್ಬೈಲು,ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅದ್ಯಕ್ಷ ವಾಸುದೇವ ಖಾರ್ವಿ,ರವಿ ದೇವಾಡಿಗ ಉಪ್ಪಿನಕುದ್ರು,ಜ್ಯೋತಿ ಎಸ್.ಡಿ ಮರವಂತೆ,ಯುವ ನವ ಗೆಳೆಯರ ಬಳಗ ನೀರೋಣಿ ಉಪಸ್ಥಿತರಿದ್ದರು.ಶ್ರೀಸುಬ್ರಹ್ಮಣ್ಯ ದೇವಸ್ಥಾನ ಮರವಂತೆ ಧರ್ಮದರ್ಶಿಗಳಾದ ತಿಮ್ಮ.ವಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.ಸಾಂಸ್ಕøತಿಕ ನೃತ್ಯ ವೈಭವ,ಗಗ್ಗರ ದೈವ ದನಿ ಎಂಬ ನಾಟಕ ಪ್ರದರ್ಶನ ಜರುಗಿತು.






















































































































































































































































































































































































































































































































































































































































































































































































































































































































































































































































































































































































































































































































































































































































































