ಶ್ರೀಸ್ವರ್ಣಯಕ್ಷೀ ವಾರ್ಷಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮ
ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಗ್ರಾಮದ ಶ್ರೀಸ್ವರ್ಣಯಕ್ಷೀ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶನಿವಾರ ನಡೆಯಿತು.ವರ್ಧಂತಿ ಉತ್ಸವದ ಅಂಗವಾಗಿ ಶ್ರೀದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಮತ್ತು ಹಣ್ಣುಕಾಯಿ ಸೇವೆ,ಸಾರ್ವಜನಿಕ ಅನ್ನತಂರ್ಪಣೆ ಕಾರ್ಯಕ್ರಮ ಜರುಗಿತು.ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು.
ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದ ಪಿಠಂ ಶೃಂಗೇರಿ ನಾಗ ಪಾತ್ರಿಗಳಾದ ವೇ.ಮೂ.ಲೋಕೇಶ್ ಅಡಿಗ ಬಡಾಕೆರೆ ನಾವುಂದ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವೇ.ಮೂ ಲಕ್ಷ್ಮೀಶ ಅಡಿಗ ಅವರು ಧಾರ್ಮಿಕ ಪ್ರವಚನ ನೀಡಿ ಮಾತನಾಡಿ,ಅರ್ಚಕರ ಪ್ರಭಾವ ಮತ್ತು ಮಂತ್ರ ಶಕ್ತಿಯಿಂದ ಬಿಂಬವೂ ದೇವರಾಗಿ ಮಾರ್ಪಾಟಾಗುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ.ಅದೇ ಪ್ರಕಾರ ಬಡಾಕೆರೆ ಶ್ರೀಸ್ವರ್ಣಯಕ್ಷ್ಮೀ ದೇವಸ್ಥಾನದಲ್ಲಿ ಬ್ರಹ್ಮಕಲಶ ಸ್ಥಾಪನೆ,ದುರ್ಗಾಹೋಮ ಸೇರಿದಂತೆ ನಾನಾ ಧಾರ್ಮಿಕ ಪೂಜೆ ಕೈಂಕರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.ಸರ್ವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಶಾಂತ ಮಾಧವ ಅಡಿಗ ಮತ್ತು ಮನೆಯವರು,ಗ್ರಾಮಸ್ಥರು ಉಪಸ್ಥಿತರಿದ್ದರು.