ನರಸಿಂಹ ದೇವಾಡಿಗ ಅರೆಹೊಳೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆ
ಕುಂದಾಪುರ:ಬೈಂದೂರು ತಾಲೂಕಿನ ಅರೆಹೊಳೆ ಹಾಲು ಉತ್ಪಾದಕರ ಸಂಘ ಅದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನರಸಿಂಹ ದೇವಾಡಿಗ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿವೇಕಾನಂದ ಆಚಾರ್ಯ,ನಿರ್ದೇಶಕರಾಗಿ ಎ.ರಮಾನಂದ ಮಧ್ಯಸ್ಥ,ಅಣ್ಣಪ್ಪ ಪೂಜಾರಿ,ರಾಜು ದೇವಾಡಿಗ,ಹರೀಶ ಆಚಾರ್ಯ,ರಾಮ,ಬೇಬಿ ಪೂಜಾರಿ,ಭಾರತಿ ಆಚಾರ್ಯ,ಕಮಲ ದೇವಾಡಿಗ,ದೇವಕಿ ಚೆಂದನ್ ಆಯ್ಕೆಯಾದರು.ಸುನೀಲ್ ಕುಮಾರ್ ಚುನಾವಣಾ ವೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.ಸಂಘದ ಕಾರ್ಯದರ್ಶಿ ಉಮೇಶ ಮದ್ಯಸ್ಥ,ಸಹಾಯಕಿ ಜ್ಯೋತಿ ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































