ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಕ್ಕುಗಳ ಸಪ್ತಾಹ

Share

ಕುಂದಾಪುರ:ಏಳೆಯ ವಯಸ್ಸಿನಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುಲು ಮಕ್ಕಳ ಗ್ರಾಮಸಭೆ ಅಂತಹ ವೇದಿಕೆ ವಿದ್ಯಾರ್ಥಿಗಳಿಗೆ ಉತ್ತಮವಾದ ಅವಕಾಶವನ್ನು ಒದಗಿಸಿ ಕೊಡುತ್ತದೆ.ಗ್ರಾಮ ಸಭೆಯಲ್ಲಿ ಮಂಡಿಸಿದಂತಹ ಮಕ್ಕಳ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಕ್ಲಾಡಿ ಪಂಚಾಯಿತಿ ಉಪಾಧ್ಯಕ್ಷ ಹೊಳ್ಮಗೆ ಸುಭಾಶ್ ಶೆಟ್ಟಿ ಹೇಳಿದರು.
ಹಕ್ಲಾಡಿ ಗ್ರಾಮ ಪಂಚಾಯತ್ ವತಿಯಿಂದ ಕೆ.ಎಸ್.ಎಸ್ ಸರಕಾರಿ ಪ್ರೌಢಶಾಲೆ ಹಕ್ಲಾಡಿಯಲ್ಲಿ ಸೋಮವಾರ ನಡೆದ 2023-24ನೇ ಸಾಲಿನ ಮಕ್ಕಳ ಗ್ರಾಮಸಭೆ ಮತ್ತು ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಕ್ಲಾಡಿ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಮಕ್ಕಳ ಮಿತ್ರ ಚಂದ್ರಹಾಸ ಹೊಳ್ಮಗೆ,ಹಕ್ಲಾಡಿ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ,ನಮ್ಮ ಭೂಮಿ ಮೇಲ್ವಿಚಾರಕ ಶ್ರೀನಿವಾಸ ಗಾಣಿಗ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸಿಂಧು,ಗ್ರಾಮಕರಣಿಕ ವಿಘ್ನೇಶ,ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ,ಆಶಾ ಮತ್ತು ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿಗಳು,ಲೆಕ್ಕ ಸಹಾಯಕರು,ಹಕ್ಲಾಡಿ ಗ್ರಾಮ ಪಂಚಾಯತ್ ಸರ್ವ ಸದಸ್ಯರುಉಪಸ್ಥಿತರಿದ್ದರು.ಪಿಡಿಒ ಸತೀಶ್ ವಡ್ಡರ್ಸೆ ಸ್ವಾಗತಿಸಿದರು.ಶ್ರೇಯಾ ನಿರೂಪಿಸಿದರು.ಪಂಚಾಯತ್ ಸಿಬ್ಬಂದಿ ಶೇಖರ್ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page