ಹೆಮ್ಮಾಡಿ:ಆರ್ಯ ಬಿಲ್ಡ್ ಕೇರ್ ನೂತನ ಸಂಸ್ಥೆ ಉದ್ಘಾಟನೆ

Share

Advertisement
Advertisement

ಬೈಂದೂರು:ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ನೂತನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಸೋಮವಾರ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.

Advertisement

ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್ ಎನ್ನುವುದು ಜಿಪ್ಸಮ್ ಆಗಿದ್ದು,ಮನೆ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಬಳಸ ಬಹುದಾಗಿದೆ.ಕ್ವಾಲಿಟಿ ಉತ್ತಮವಾಗಿದ್ದು ಗ್ರಾಹಕರಿಗೆ ಒಳ್ಳೆಯ ರೀತಿ ಅನುಭವನ್ನು ಕೊಡುತ್ತದೆ ಎಂದು ಹೇಳಿದರು.ಮರಳು ಮತ್ತು ನೀರಿನ ಬಳಕೆಯನ್ನು ತಗ್ಗಿಸ ಬಹುದಾದ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಒಗ್ಗಿಕೊಳ್ಳುವಂತಹ ವಿನೂತನ ಮಾದರಿಯ ಸಾರ್ವಿನ್ ಪ್ಲಾಸ್ಟ್ ಕಟ್ಟಡ ನಿರ್ಮಾಣದ ಕೆಲಸಕ್ಕೆ ಯೋಗ್ಯವಾದ ಮೂಲ ವಸ್ತುವಾಗಿದೆ ಎಂದರು.

ಆರ್ಯ ಬಿಲ್ಡ್ ಕೇರ್ ಮಾಲೀಕರಾದ ಜೋಶಿ ತೋಮಸ ಮಾತನಾಡಿ,ಸಾರ್ವಿನ್ ಪ್ಲಾಸ್ಟ್ ಮರಳಿನ ಸಮಸ್ಯೆ ಹಾಗೂ ಕಾರ್ಮಿಕರ ಸಮಸ್ಯೆಗೆ ಪರಿಹಾರದ ಮಾರ್ಗವಾಗಿದ್ದು,ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ ಎಂದರು.
ಆರ್ಯ ಎಂರ್ಟಪ್ರ್ರೈಸಸ್ ನಾವುಂದ ಮಾಲೀಕರಾದ ನಾಗೇಂದ್ರ ದೇವಾಡಿಗ ಅವರು ಮಾತನಾಡಿ,ನಮ್ಮ ನೂತನ ಸಂಸ್ಥೆಯನ್ನು ಹಿರಿಯ ಆಶೀರ್ವಾದದಿಂದ ಹೆಮ್ಮಾಡಿಯಲ್ಲಿ ಆರಂಭಿಸಲಾಗಿದೆ.ನಮ್ಮ ಸಂಸ್ಥೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.ಇದೊಂದು ವಿನೂತನ ಮಾದರಿಯ ಜಿಪ್ಸಮ್ ಆಗಿದ್ದು ಮರಳಿನ ಬಳಕೆ ಇಲ್ಲದೆ ಕಟ್ಟಡ,ಮನೆ ನಿರ್ಮಾಣದ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದರು.ಕರಾವಳಿ ತೀರ ಪ್ರದೇಶ ಸೇರಿದಂತೆ ಮಲೆನಾಡು ಭಾಗದ ವಾತಾವರಣಕ್ಕೂ ಸಾರ್ವಿನ್ ಪ್ಲಾಸ್ಟ್ ಒಗ್ಗಿಕೊಳ್ಳುತ್ತದೆ ಗ್ಯಾರಂಟಿ ನೀಡುವುದರ ಜತೆಗೆ ಮನೆ ಬಾಗಿಲಿಗೆ ಪ್ರಾಡೆಕ್ಟ್ ಸಫ್ಲೇ ಕೂಡ ಮಾಡಲಾಗುತ್ತದೆ ಎಂದರು.

ಎಮಿಯೆಂಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಸಕ ನಿತಿನ್ ಅವರು ಮಾತನಾಡಿ,ಮರಳು,ವಾಟರ್ ಕ್ವಿರಿಂಗ್ ಇಲ್ಲದೆ ಸಾರ್ವಿನ್ ಪ್ಲಾಸ್ಟ್‍ಅನ್ನು ಕಟ್ಟಡ ನಿರ್ಮಾಣದ ಕೆಲಸದಲ್ಲಿ ಬಳಸಿಕೊಳ್ಳಬಹುದಾಗಿದೆ.ಸಾರ್ವಿನ್ ಪ್ಲಾಸ್ಟ್ ಬಳಕೆಯಿಂದ ಹಣ ಮತ್ತು ಸಮಯದ ಉಳಿತಾಯ ಕೂಡ ಆಗಲಿದೆ ಎಂದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಎಸ್ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಅವರು ಸಂಸ್ಥೆಗೆ ಭೇಟಿ ನೀಡಿ ನವ ಉದ್ಯಮಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರು,ಸಿಬ್ಬಂದಿಗಳು,ಅತಿಥಿಗಳು ಉಪಸ್ಥಿತರಿದ್ದರು.ಪ್ರಕಾಶ ದೇವಾಡಿಗ ಸ್ವಾಗತಿಸಿದರು.ಸಂಸ್ಥೆಯ ಸಹ ಮಾಲೀಕರಾದ ಲಂಬೋದರ ಶೆಟ್ಟಿ ವಂದಿಸಿದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page