ಜಗದೀಶ್ ಶೆಟ್ಟಿ ಕುದ್ರಕೋಡುಗೆ ವಿದ್ಯಾ ಪೋಷಕ ರತ್ನ ಪ್ರಶಸಿ ಪ್ರಧಾನ
ಬೈಂದೂರು:ಗ್ರಾಮೀಣ ಪ್ರದೇಶ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸೀಗಬೇಕು ಎನ್ನುವ ಉದ್ದೇಶದಿಂದ ನಾವುಂದ ಕೋಯಾನಗರ ಶಾಲೆಯನ್ನು ಕಳೆದ ಎಂಟು ವರ್ಷಗಳ ಹಿಂದೆ ದತ್ತು ಸ್ವೀಕಾರ ಮಾಡಲಾಗಿದೆ.ಮುಂದಿನ ದಿನಗಳಲ್ಲಿಯೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ದಾನಿಗಳಾದ ಜಗದೀಶ್ ಶೆಟ್ಟಿ ಕುದ್ರಕೋಡು ಹೇಳಿದರು.
ಬೈಂದೂರು ತಾಲೂಕಿನ ನಾವುಂದ ಸರಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆಯಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾ ಪೋಷಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಉದ್ಯಮಿ ನಗು ಗ್ರೂಪ್ ಕುಶಲ ಶೆಟ್ಟಿ ಮಾತನಾಡಿ,ಸರಕಾರಿ ಶಾಲೆಗಳಲ್ಲಿ ಓದಿದ ಬಹಳಷ್ಟು ಮಂದಿ ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಪ್ರಾಥಮಿಕ ಶಿಕ್ಷಣ ಬದುಕಿಗೆ ಒಳ್ಳೆ ಚೌಕಟ್ಟನ್ನು ಹಾಕಿ ಕೊಡುತ್ತದೆ ಎಂದರು.
ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಅತಿಥಿಗಳು ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































