ಜೆಸಿಐ ಉಪ್ಪುಂದ ಅಧ್ಯಕ್ಷರಾಗಿ ಮಂಜುನಾಥ ಆರ್ ದೇವಾಡಿಗ ಆಯ್ಕೆ
ಕುಂದಾಪುರ:ಜೆಸಿಐ ಉಪ್ಪುಂದ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಆರ್ ದೇವಾಡಿಗ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ,ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ರಾಜ್ಯ ಮಟ್ಟದ ಯೋಗ ಸಂಪನ್ಮೂಲ ವ್ಯಕ್ತಿಗಳಾಗಿರುವ ಅವರು ನೂರಾರು ಯೋಗ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ವಿಜ್ ಮಾಸ್ಟರ್ ಆಗಿಯೂ ಕಾರ್ಯ ನಿರ್ವಹಿಸಿರುವ ಮಂಜುನಾಥ ದೇವಾಡಿಗ ಅವರು ಸಂವೇದನಾ ಟ್ರಸ್ಟ್ (ರಿ ) ನಾಯ್ಕನಕಟ್ಟೆ ಅದರ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ ಟ್ರಸ್ಟಿಯಾಗಿಯಾಗಿದ್ದಾರೆ. ಬೈಂದೂರು ವಲಯದ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ಅವರು ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಬೈಂದೂರು ವಲಯದ ಸಹಕಾರ್ಯದರ್ಶಿಯೂ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಎಮ್.ಎ.ಬಿ.ಎಡ್.ಶಿಕ್ಷಣವನ್ನು ಪಡೆದಿರುವ ಮಂಜುನಾಥ ದೇವಾಡಿಗ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದ ಡಿಪ್ಲೋಮಾ ಇನ್ ಯೋಗ ಎಜುಕೇಶನ್ ನಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































