ಆಲೂರು:ಅಶಕ್ತ ಕುಟುಂಬಕ್ಕೆ ಬೇಕಿದೆ ನೆರವು

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ಸೆಳೆಕೋಡು ನಿವಾಸಿ ಕೃಷಿಕ ವಿಜಯ ಕುಮಾರ ಶೆಟ್ಟಿ ಎಂಬುವರು ಕಾಡಿನಿಂದ ಸೊಪ್ಪು ತರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಬೆನ್ನುಹುರಿಗೆ ಘಾಸಿಯಾಗಿ ದಿವ್ಯಂಗರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದ್ದಾರೆ.ಇದರ ನಡುವೆ ಅವರ ಏಕೈಕ ಪುತ್ರಿ ಎರಡನೇ ತರಗತಿ ವಿದ್ಯಾರ್ಥಿನಿ ಸೃಷ್ಟಿಗೆ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ.ಸಂಕಷ್ಟದಲ್ಲಿದ್ದ ಬಡ ಕುಟುಂಬ ದಿಕ್ಕು ತೋಚದಂತಾಗಿದ್ದು ಸಾಮಾಜಿಕ ನೆರವನ್ನು ಯಾಚಿಸಿದೆ.
ಪ್ರಗತಿಪರ ಬಡ ಕೃಷಿಕರಾದ ವಿಜಯ ಕುಮಾರ್ ಶೆಟ್ಟಿ ಅವರು ಮಳೆಗಾಲದ ಸಮಯದಲ್ಲಿ ಕಾಡಿಗೆ ಹೋಗಿ ಸೊಪ್ಪು ತರುವ ವೇಳೆಯಲ್ಲಿ ಕಾಲು ಜಾರಿ ಬಿದ್ದಿದ ಪರಿಣಾಮ ಅವರ ಬೆನ್ನು ಹುರಿಗೆ ಬಲವಾದ ಪೆಟ್ಟು ಬಿದ್ದಿದ್ದೆ.ಕೆಲಸ ಮಾಡಲು ಸಾಧ್ಯವಾಗದೆ ಹಾಸಿಗೆಯಲ್ಲಿ ಜೀವನವನ್ನು ಕಳೆಯುತ್ತಿದ್ದಾರೆ ಅವರ ಕೃಷಿ ಭೂಮಿಗಳು ಹಡವು ಬಿದ್ದಿದೆ.ದುರಂತ ಎನ್ನುವಂತೆ ಅವರ ಏಕೈಕ ಪುತ್ರಿಗೆ ಬ್ಲಡ್ ಕ್ಯಾನ್ಸರ್ ರೋಗ ತಗುಲಿದೆ.ನಿರಂತರ ಎರಡು ವರ್ಷಗಳ ಕಾಲ ಚಿಕಿತ್ಸೆ ಹಾಗೂ ಸತತ ಏಳು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದುಕೊಂಡು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕಾದ ಅವಶ್ಯಕತೆ ಇದೆ.ಮಗುವಿನ ಚಿಕಿತ್ಸೆಗೆ 30 ಲಕ್ಷಕ್ಕೂ ಅಧಿಕ ಹಣ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬ ಕಂಗಾಲಾಗಿದೆ.ಅಶಕ್ತ ಕುಟುಂಬ ಸಾಮಾಜಿಕ ನೆರವನ್ನು ಯಾಚಿಸಿದ್ದಾರೆ.

ಹಣ ಕಳುಹಿಸ ಬಯಸುವವರು ನೆರವಾಗಿ ಅವರ ಪತ್ನಿ ಖಾತೆಗೆ ಹಣವನ್ನು ಜಮೆ ಮಾಡಬಹುದು.
ಹೆಸರು:ಭಾರತಿ
ಕೆನರಾ ಬ್ಯಾಂಕ್-ನೇರಳಕಟ್ಟೆ
ಬ್ಯಾಂಕ್ ಖಾತೆ ಸಂಖ್ಯೆ-42539758867
ಐಎಫ್ಎಸ್ಸಿ ಕೋಡ್-ಸಿಎನ್ಬಿಆರ್0000650
ಪೋನ್ ಪೇ-8861379874





















































































































































































































































































































































































































































































































































































































































































































































































































































































































































































































































































































































































































































































































































































































































































