ಸಾವಿನಲ್ಲೂ ಸಾರ್ಥಕತೆ ಮೆರೆದ ಕುಶಲ ಶೆಟ್ಟಿ ಆಲೂರು
ಕುಂದಾಪುರ:ತಾಲೂಕಿನ ಆಲೂರು ಗ್ರಾಮ ಪಂಚಾಯತ್ ಹಾಗೂ ಆಲೂರು ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಗ್ರಾಮ ವಿಕಾಸ ಸಮಿತಿ ಕಾರ್ಯಕರ್ತರಾದ ಆಲೂರು ಗ್ರಾಮದ ನಿವಾಸಿ ಕುಶಲ ಶೆಟ್ಟಿ (65) ಅವರು ಅನಾರೋಗ್ಯ ಕಾರಣದಿಂದ ಬುಧವಾರ ನಿಧನರಾದರು.ಅವರಿಗೆ ಪತ್ನಿ,ಓರ್ವ ಪುತ್ರಿ ಇದ್ದಾರೆ.
ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಕುಶಲ ಶೆಟ್ಟಿ ಅವರು ಕಳೆದ ಏಳು ವರ್ಷಗಳ ಹಿಂದೆಯೇ ತಮ್ಮ ದೇಹವನ್ನು ದಾನ ಮಾಡುವುದರ ಮುಖೇನ ಮಾದರಿ ಹೆಜ್ಜೆಯನ್ನು ಇಟ್ಟಿದ್ದರು.ಕುಶಲ ಶೆಟ್ಟಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟ ಬಳಿಕ ಅವರ ಕುಟುಂಬಸ್ಥರು ಮೃತರ ಇಚ್ಛೆಯಂತೆ ದೇಹವನ್ನು ಸಂಬಂಧಿಸಿದ ಸಂಸ್ಥೆಗೆ ದಾನವನ್ನು ಮಾಡಿದ್ದಾರೆ.































































































































































































































































































































































































































































































































































































































































































































































































































































































































































































































































































































































































































































































































































































































































































