ಹೈನುಗಾರಿಕೆಯಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಯಶಸ್ವಿ ಕೃಷಿಕ ಸಾಬ್ಲಾಡಿ ಮಂಜಯ್ಯ ಶೆಟ್ಟಿ
ಕುಂದಾಪುರ:ತಾಲೂಕಿನ ಮೂಲತಃ ಹಟ್ಟಿಯಂಗಡಿ ಗ್ರಾಮದ ಸಾಬ್ಲಾಡಿ ನಿವಾಸಿ ಪ್ರಸ್ತುತ ಹುಣ್ಸೆಮಕ್ಕಿಯಲ್ಲಿ ವಾಸಮಾಡುತ್ತಿರುವ ಸಬ್ಲಾಡಿ ಮಂಜಯ್ಯ ಶೆಟ್ಟಿ ಅವರು ಉದ್ಯಮದ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿ ಸುಮಾರು 60 ಕ್ಕೂ ಹೆಚ್ಚಿನ ಹಸುಗಳನ್ನು ಸಾಕಿ ಕೊಂಡು ದಿನವೊಂದಕ್ಕೆ ಅಂದಾಜು 300 ಲೀಟರ್ ಹಾಲು ಉತ್ಪಾದನೆಯನ್ನು ಮಾಡುತ್ತಿದ್ದಾರೆ.
ಹೈನುಗಾರಿಕೆಯಲ್ಲಿ ತೊಡಗಿ ಕೊಂಡು ಹಸುಗಳ ಜೊತೆ ನೆಮ್ಮದಿ ಜೀವನವನ್ನು ಸಾಗಿಸುತ್ತಿರುವ ಸಬ್ಲಾಡಿ ಮಂಜಯ್ಯ ಶೆಟ್ಟಿ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದೆ.ಅವರ ಧರ್ಮ ಪತ್ನಿ ವಸಂತಿ ಶೆಡ್ತಿ ಹಾಗೂ ಮಗಳಾದ ದೀಪ್ತಿ ಎನ್ ಹೆಗ್ಡೆ,ಅಳಿಯ ಸುರೇಂದ್ರ ಹೆಗ್ಡೆ ಮತ್ತು ಮೊಮ್ಮಕ್ಕಳಾದ ಅನಿಕಾ ಮತ್ತು ನದಿ ಜೊತೆಗೆ ಖುಷಿಯ ಸಂಸಾರವನ್ನು ನಡೆಸುತ್ತಿದ್ದಾರೆ.
ಜರ್ಸಿ,ಎಚ್.ಎಫ್ ಸೇರಿದಂತೆ ಗಿರ್ ತಳಿಯ ಜಾನುವಾರುಗಳನ್ನು ಸಾಕುತ್ತಿರುವ ಮಂಜಯ್ಯ ಶೆಟ್ಟಿ ಅವರು ಹಸು ಗಳಿಗೆಂದೆ ಎರಡು ಎಕರೆ ಪ್ರದೇಶದಲ್ಲಿ ಹಸಿ ಹುಲ್ಲನ್ನು ಬೆಳೆಸುತ್ತಿದ್ದಾರೆ, ಫೀಡ್ ಗಿಂತ ಹಸಿ ಹುಲ್ಲು ದನಕರುಗಳಿಗೆ ಆರೋಗ್ಯ ದಾಯಕವಾದದು ಎನ್ನುವುದು ಮಂಜಯ್ಯ ಶೆಟ್ಟಿ ಅವರ ಅಭಿಪ್ರಾಯ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಮಾಡಿರುವ ಸಬ್ಲಾಡಿ ಮಂಜಯ್ಯ ಶೆಟ್ಟಿ ಅವರು 1982ರಲ್ಲೇ ಕೃಷಿ ಮತ್ತು ತೋಟಗಾರಿಕೆ ಹಾಗೂ ಹೈನುಗಾರಿಕೆಗೆ ಯಲ್ಲಿ ತೊಡಗಿಕೊಂಡಿದ್ದಾರೆ.
ಸಂಚಾರದ ವ್ಯವಸ್ಥೆ ಇಲ್ಲದ ಕೆರಾಡಿ ಎನ್ನುವ ಕೂಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಕೀರ್ತಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಅವರಿಗೆ ಸಲ್ಲುತ್ತದೆ.
ಬಸ್ ಮತ್ತು ಗೇರು ಉದ್ಯಮವನ್ನು ನಡೆಸುತ್ತಿದ್ದರು ಅವರ ಆಸಕ್ತಿ ಮಾತ್ರ ಹೈನುಗಾರಿಕೆಯತ್ತಾ ಸೆಳೆದಿದೆ.
7000 ಅಡಿಕೆ ಗಿಡ,1500 ತೆಂಗು,ಬಾಳೆ,ಕಾಳು ಮೆಣಸು ಮತ್ತು ಭತ್ತವನ್ನು ಕೂಡ ಬೆಳೆಯುತ್ತಾರೆ.
ಧಾರ್ಮಿಕ ಹಾಗೂ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ ಅವರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಯಾಗಿಯೂ,ಪ್ರಸ್ತುತ ಸೌಕೂರು ದೇವಸ್ಥಾನದ ಮ್ಯಾನೆಂಜಿಗ್ ಟ್ರಸ್ಟಿ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಹುಣ್ಸೆಮಕ್ಕಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ವಂಡ್ಸೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ.ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಆಶಯ ನಮ್ಮದಾಗಿದೆ.