ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ:ಜನತಾ ಕಾಲೇಜಿನ ಕಮಲ್ ಕಿಶೋರ್ ಸಾಧನೆ
ಹೆಮ್ಮಾಡಿ:ಕುಂದಾಪುರ ಭಂಡಾರ್ಕಾರ್ಸ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ,ಕನ್ನಡ ಚಲನಚಿತ್ರ ಗಾಯನ ವಿಭಾಗದಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಮಲ್ ಕಿಶೋರ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.































































































































































































































































































































































































































































































































































































































































































































































































































































































































































































































































































































































































































































































































































































































































































