ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬಗೆ ಸನ್ಮಾನ
ಹೆಮ್ಮಾಡಿ:ಕಿತ್ತಳೆ ಹಣ್ಣನ್ನು ಮಾರಿ ಸರಕಾರಿ ಶಾಲೆಯನ್ನು ಕಟ್ಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರನ್ನು ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ನಡೆದ ಜನತಾ ಆವಿಷ್ಕಾರ್ 2K23 ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕಾಲೇಜಿನ ಅಧ್ಯಕ್ಷರಾದ ಪ್ರಿನ್ಸಿಪಾಲ್ ಗಣೇಶ ಮೊಗವೀರ,ಮಾಧವ ಪೂಜಾರಿ,ಚಿತ್ರಾ ಕಾರಂತ,ಹರ್ಷವರ್ಧನ ಶೆಟ್ಟಿ,ತಿಮ್ಮಪ್ಪ ಮೊಗವೀರ,ಉದಯ ಕುಮಾರ್ ಹಟ್ಟಿಯಂಗಡಿ, ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































