ನ.09 ರಂದುಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2023 ವಿಶೇಷ,ವಿನೂತನ ಕಾರ್ಯಕ್ರಮ.

Share

ಹೆಮ್ಮಾಡಿ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ನ.9 ಗುರುವಾರ ದಂದು ಜನತಾ ಆವಿಷ್ಕಾರ್
2023 (ವಿಜ್ಞಾನ-ವ್ಯವಹಾರ-ಸಾಂಸ್ಕ್ರತಿಕ ಸಂಗಮ) ವೈಭವದ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವೈಶಿಷ್ಟ್ಯಗಳು:
ವ್ಯವಹಾರ ಮೇಳ:ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಹಾಗೂ ಮಾರ್ಕೆಟಿಂಗ್ ಕೌಶಲ್ಯ ಬೆಳೆಸುವ ಉದ್ದೇಶದಿಂದ,ವಿಶಾಲವಾದ ಜನತಾ ಕ್ರೀಡಾಂಗಣದಲ್ಲಿ ತೆರೆದ 30 ಮಳಿಗೆಗಳ
ಮೂಲಕ ಜನತಾ ವಿದ್ಯಾರ್ಥಿಗಳ ವ್ಯವಹಾರ ಮೇಳ.
ಜಾನಪದ ಹಬ್ಬ:ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಸಾಮೂಹಿಕ ಜಾನಪದ ನೃತ್ಯ ಸ್ಪರ್ಧೆ.

ವಿಜ್ಞಾನ ವಿಸ್ಮಯ:ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ.

ಚಿತ್ರ-ಚಿತ್ತಾರ:ಜನತಾ ವಿದ್ಯಾರ್ಥಿಗಳು ಸ್ವರಚಿಸಿದ ಚಿತ್ರ ಕಲಾ ಪ್ರದರ್ಶನ.

ಭಾವ-ಸಂಗಮ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಭಾವ ಗೀತೆಗಳ ಸ್ವರ ಮಾಧುರ್ಯ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ,
ಶ್ರೀ ವಿ.ವಿ.ವಿ.ಮಂಡಳಿ(ರಿ) ಹೆಮ್ಮಾಡಿ ಅಧ್ಯಕ್ಷರು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ.ಕೆ.ಗೋಪಾಲ ಪೂಜಾರಿಯವರು ಅಧ್ಯಕ್ಷತೆ ವಹಿಸಲಿದ್ದು,ಸಮಾರಂಭದಲ್ಲಿ
ಕರ್ನಾಟಕ ಸರ್ಕಾರದ ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವರಾದ ಶ್ರೀ ಮಾಂಕಾಳ ವೈದ್ಯ,ನಾಡೋಜ ಜಿ.ಶಂಕರ್,
ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ,ಉಡುಪಿ
ಜಿಲ್ಲಾಧಿಕಾರಿ ಡಾ|ವಿದ್ಯಾ ಕುಮಾರಿ, ಉದ್ಯಮಿ ಆನಂದ ಸಿ.ಕುಂದರ್ ಪದ್ಮಶ್ರೀ ಪ್ರಸಸ್ತಿ ಪುರಸ್ಕೃತರಾದ ಶ್ರೀ ಹರೆಕಾಲ ಹಾಜಬ್ಬ, ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿರುವ ಶ್ರೀ ಮಾರುತಿ,ಹಾಗೂ ಇನ್ನಿತರ ಯುವ ಉದ್ಯಮಿಗಳು, ಜನ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.

ಈ ವೈಭವದ ಕಾರ್ಯಕ್ರಮಕ್ಕೆ ಸಮಸ್ತ ವಿದ್ಯಾಭಿಮಾನಿಗಳು, ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು, ಭಾಗವಹಿಸಲಿದ್ದು, ಸರಿ ಸುಮಾರು 5,000ಜನ ಸೇರುವ ನೀರಿಕ್ಷೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page