ಬೈಂದೂರು ತಾಲೂಕು ಆಡಳಿತ ಕೇಂದ್ರದ ಅವ್ಯವಸ್ಥೆ ವಿರುದ್ಧ ಸಾಮಾಜಿಕ ಹೋರಾಟಗಾರ ರಿಂದ ಪ್ರತಿಭಟನೆ

ಬೈಂದೂರು:ತಾಲೂಕು ಕೇಂದ್ರವಾದ ಬೈಂದೂರಿನ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿ ವರ್ಷ ಕಳೆದರೂ ಪೂರ್ಣಪ್ರಮಾಣದಲ್ಲಿ ಸೇವೆ ದೊರೆಯುತ್ತಿಲ್ಲ.ಶೌಚಾಲಯ, ಫ್ಯಾನ್ ಸೇರಿದಂತೆ ಯಾವುದೇ ವ್ಯವಸ್ಥೆಗಳಿಲ್ಲ. ಮಾತ್ರವಲ್ಲದೆ ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸುವ ಸಾರ್ವ ಜನಿಕರಿಗೆ ಕನಿಷ್ಠ ಒಂದೂ ಆಸನದ ವ್ಯವಸ್ಥೆಯಿಲ್ಲ.ಕಂದಾಯ ಕೋರ್ಟ್ ಇದ್ದಾಗ ಹಿರಿಯರು ಮಹಿಳೆಯ ರು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಹೀಗಾಗಿ ಆಸನ ವ್ಯವಸ್ಥೆ ಮಾಡುವವರೆಗೆ ತಹಶೀಲ್ದಾರ್ ಕಚೇರಿ ಎದುರು ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಬಿಜೂರು ಮಲಗಿ ಪ್ರತಿಭಟಿಸಿದರು.
ಬಳಿಕ ಕಂದಾಯ ಅಧಿಕಾರಿಗಳು ಕುರ್ಚಿ ವ್ಯವಸ್ಥೆ ಮಾಡಿದರು.ಬೈಂದೂರು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯುತ್ತಿಲ್ಲ ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































