ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ವಿಫಲ ಯತ್ನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವಾ ಕಳವಿಗೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೆ.3 ರಂದು ಶುಕ್ರವಾರ ಬೆಳಗಿನ ಜಾವಾ 1.40 ರ ಸುಮಾರಿಗೆ ರಾಷ್ಷ್ರೀಯ ಹೆದ್ದಾರಿ 66 ರಲ್ಲಿ ಬೈಕ್‍ನಲ್ಲಿ ಬಂದಿಳಿದ ಇಬ್ಬರು ಕಳ್ಳರು ಮರವಂತೆ ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ನುಗ್ಗಿದ್ದಾರೆ.ಹೆಲ್ಮೆಟ್ ಧರಿಸಿದ ವ್ಯಕ್ತಿಯೊರ್ವ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವಿಗೆ ಯತ್ನಿಸಿದ್ದಾನೆ.ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಲು ಅಸಾಧ್ಯವೇನಿಸಿದಾಗ ಕಳ್ಳರಿಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.
ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದ ಕಳ್ಳರು,
ನಾವುಂದ-ಮರವಂತೆ ಜುಮ್ಮಾ ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ಬೀಗ ಮುರಿದ್ದಿದ್ದಾರೆ.
ಕಿರಿಮಂಜೇಶ್ವರ ಕಾನವೀರ ಮಾಸ್ತಿಅಮ್ಮ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಸಹ ಮುರಿದಿದ್ದಾರೆ.
ಸರಣಿ ಕಳ್ಳತನದಲ್ಲಿ ಭಾಗಿಯಾಗಿದ್ದ ಕಳ್ಳರು ಅಮೂಲ್ಯವಾದ ಸ್ವತ್ತುಗಳನ್ನು ದೋಚಲು ವಿಫಲರಾಗಿದ್ದಾರೆ.
ಮೂರು ಕಡೆಗಳಲ್ಲಿ ನಡೆದ ಕಳ್ಳತನದಲ್ಲಿ ಒಂದೇ ತಂಡ ಭಾಗಿಯಾಗಿರುವ ಬಗ್ಗೆ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































