ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ,ಮುಷ್ಠಿಕಾಣಿಕೆ ಸಮರ್ಪಣೆ

Share

https://youtu.be/H9qnMXhPtg0

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಹಮ್ಮಿಕೊಂಡಿದ್ದ ಅಷ್ಟಮಂಗಲ ಪ್ರಶ್ನಾ ಚಿಂತನಾ ವಿಮರ್ಶೆಯ ಪ್ರಕಾರ ಮೊದಲ ಹಂತದ ಪ್ರಾಯಶ್ಚಿತ ಭಾಗವಾಗಿ ಹಾಗೂ ಲೋಕ ಕಲ್ಯಾಣ ಮತ್ತು ರುದ್ರಕೋಪ ಶಮನಾರ್ಥವಾಗಿ ಸಂಜೀವಿನಿ ಮೃತ್ಯುಂಜಯ ಹೋಮ,ಗಣಹೋಮ,ಮುಷ್ಠಿಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.
ಶ್ರೀಗುಹೇಶ್ವರ ದೇವಾಲಯದ ತಂತ್ರಿಗಳಾಗಿ ನೇಮಕಗೊಂಡಿರುವ ವೇ.ಮೂ ಶ್ರೀಶ ಅಡಿಗ ಅವರಿಗೆ ಗ್ರಾಮಸ್ಥರ ಪರವಾಗಿ ವರಣೆಯನ್ನು ನೀಡಲಾಯಿತು.ಈ ಸಂದರ್ಭ ವ್ಯವಸ್ಥಾಪನಾ ಮತ್ತು ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರತಿ ಸೋಮವಾರ ಗ್ರಾಮಸ್ಥರು ಹಾಗೂ ಭಕ್ತರಿಗೆ ಮುಷ್ಠಿ ಕಾಣಿಕೆಯನ್ನು ಹಾಕುವ ಅವಕಾಶ ದೊರೆಯಲಿದೆ.ಮಡಿಯಿಂದ ಬರುವುದು ಅವಶ್ಯಕವಾಗಿದೆ.ಶ್ರೀಗುಹೇಶ್ವರ,ಸ್ಕಂದ,ಪಾರ್ವತಿ,ಮಹಾಗಣಪತಿ ಮತ್ತು ಭದ್ರಕಾಳಿ ಅಮ್ಮನವರ ಸಾನಿಧ್ಯವನ್ನು ಹೊಂದಿರುವ ಪುರಾಣ ಪ್ರಸಿದ್ಧ ಶ್ರೀಗುಹೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಸಂಕಲ್ಪವನ್ನು ಮಾಡಲಾಗಿದೆ.ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು,ಸಾರ್ವಜನಿಕರು,ದಾನಿಗಳು ಸಹಕಾರವನ್ನು ನೀಡಬೇಕು ಎಂದು ದೇವಸ್ಥಾನದ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಮಯ್ಯ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜು ಗಾಣಿಗ ವಿನಂತಿಸಿಕೊಂಡಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page