ಸಮಗ್ರ ಕೃಷಿಯಲ್ಲಿ ರಾಮಯ್ಯ ಶೆಟ್ಟಿ ಕಾಲ್ತೋಡು ಅವರ ವಿಶಿಷ್ಟ ಸಾಧನೆ

ಬೈಂದೂರು:ಕಾಲ್ತೋಡು ಗ್ರಾಮದ ನಿವಾಸಿ 58 ವರ್ಷ ಪ್ರಾಯದ ರಾಮಯ್ಯ ಶೆಟ್ಟಿ ಅವರ ವ್ಯಕ್ತಿತ್ವ ಪಾದರಸದಷ್ಟೆ ಚುರುಕು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಲೆ ಇರುತ್ತಾರೆ,ಕೃಷಿಯಲ್ಲಿ ಅಗಾಧವಾದ ಅನುಭವ ಹೊಂದಿರುವ ರಾಮಯ್ಯ ಶೆಟ್ಟಿ ಅವರು 8ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.ತನ್ನ 16 ನೇ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಧುಮುಕಿದ ಅವರು ಹಿಂದೆ ಮುಂದೆ ನೋಡಲೆ ಇಲ್ಲ ತನ್ನ ವಯಸ್ಸಿನ ದಿನಗಳನ್ನು ಕೃಷಿ ಕಾಯಕದೊಂದಿಗೆ ಕಳೆದ ಕಾಯಕಯೋಗಿ ಎಂದೆ ಹೇಳಬಹುದು.ತನ್ನ 11 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿಯನ್ನು ಆರಂಭಿಸಿದ ಅವರು ಭತ್ತ,ಅಡಿಕೆ,ಗೇರು,ಕಾಳುಮೆಣಸು,ತರಕಾರಿ,ಕಾಪಿ,ಬಾಳೆಯನ್ನು ಬೆಳೆಯುತ್ತಾರೆ,ಸಾವಯವ ಗೊಬ್ಬರವನ್ನು ಬಳಸಿಕೊಂಡು ಕೃಷಿಯನ್ನು ಮಾಡುತ್ತಾ ಇದ್ದಾರೆ.

ಪ್ರಾಯೋಗಿಕವಾಗಿ 100 ಕಾಫಿ ಗಿಡಗಳನ್ನು ತನ್ನ ಕೃಷಿ ಭೂಮಿಯಲ್ಲಿ ನೆಟ್ಟು ಮುನ್ನುಡಿ ಬರೆದಿದ್ದಾರೆ ಕರಾವಳಿ ತೀರದ ವಾತಾವರಣಕ್ಕೆ ಕಾಫಿ ಗಿಡ ಒಗ್ಗಿ ಕೊಳ್ಳಬಹುದ್ದೇನ್ನುವ ಹಿನ್ನೆಲೆಯಲ್ಲಿ ತನ್ನ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಫಿ ಬೆಳೆಯನ್ನು ಅಳವಡಿಸಿಕೊಂಡಿದ್ದಾರೆ.ಕೃಷಿ ಭೂಮಿಗೆ ನೀರು ಹಾಯಿಸಲು ಎರಡು ಬಾವಿಗಳಿವೆ ನೀರಿನ ಕೊರತೆ ನಮಗೆ ಇಲ್ಲ ಎಂದು ಅವರು ಹೇಳುತ್ತಾರೆ.ಮಳೆ ಆರಂಭಗೊಳ್ಳುವ ಮೊದಲು ಅಂದರೆ ಜೂನ್ ತಿಂಗಳ ಮೊದಲ ವಾರದಲ್ಲಿ ಅಡಿಕೆ ಗಿಡಗಳಿಗೆ ಮೆಲಾಥಿನ್ ಔಷಧ ಸಿಂಪರಡಣೆ ಮಾಡಿದರೆ ಅಡಿಕೆಗೆ ತಗಲುವ ರೋಗವನ್ನು ಹತೋಟಿಗೆ ತರಬಹುದು ಎನ್ನುವುದು ಅವರ ಅನುಭವದ ಮಾತು.

ಅಡಿಕೆ ಹಾಳೆ,ತೆಂಗಿನ ಮರದ ಗರಿಯನ್ನು ಬಳಸಿಕೊಂಡು ಯಂತ್ರದಿಂದ ಪುಡಿಮಾಡಿ ಸಗಣಿಗೊಬ್ಬರವನ್ನು ಉಪಯೋಗಿಸಿಕೊಂಡು ಸಾವಯವ ಗೊಬ್ಬರವನ್ನು ತಾವೆ ತಯಾರಿಸಿಕೊಳ್ಳುತ್ತಾರೆ,ಸುಡಮಣ್ಣು ಮತ್ತು ಕೋಳಿ ಗೊಬ್ಬರವನ್ನು ಸಹ ಬಳಕೆ ಮಾಡಿಕೊಳ್ಳುತ್ತಾರೆ.
ಕೃಷಿ ಎಂದರೆ ಅದರ ಜೊತೆಯಲ್ಲೆ ಇರಬೇಕು ಉತ್ಸಾಹದಿಂದ ಕೆಲಸವನ್ನು ನಾವೇ ಮಾಡಬೇಕು ಕೃಷಿ ಲಾಭದಾಯಕವಾಗಿದೆ ಖರ್ಚೆಲ್ಲಾ ಕಳೆದು ವರ್ಷಕ್ಕೆ 4 ಲಕ್ಷ ರೂ ಆದಾಯ ಬರುತ್ತಿದೆ ಮುಂದಿನ ದಿನಗಳಲ್ಲಿ ದ್ವಿಗುಣವಾಗಲಿದೆ ಎಂದು ಅವರೆ ಹೇಳುತ್ತಾರೆ ಭೂಮಿಯನ್ನು ಹಡವು ಗೇಡಬಾರದು ಕೃಷಿಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡಿದರೆ ನಷ್ಟದ ಮಾತಿಲ್ಲ ಎನ್ನುವುದು ರಾಮಯ್ಯ ಶೆಟ್ಟರ ಅಭಿಪ್ರಾಯವಾಗಿದೆ.ಹೈನುಗಾರಿಕೆಯಲ್ಲಿ ತೊಡಗಿಕೊಂಡ ರಾಮಯ್ಯ ಶೆಟ್ಟರ ಬಳಿ 15 ದೇಶಿ ಹಸುಗಳಿವೆ.
ಕೋಳಿ ಸಾಕಾಣಿಕೆ-ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡ ಅವರು ಕೋಳಿ ಫಾರಂ ಅನ್ನು ನಿರ್ವಹಿಸುತ್ತಾ ಇದ್ದಾರೆ 4500 ಫಾರಂ ಕೋಳಿಗಳು ಅವರ ಫಾರಂನಲ್ಲಿ ಇದೆ.

ನಾಟಿ ವೈದ್ಯ ರಾಮಯ್ಯ ಶೆಟ್ಟಿ-ಕಿಡ್ನಿ ಸ್ಟೋನ್,ಪಿತ್ತಕೋಶ ಸ್ಟೋನ್,ಉರಿಮೂತ್ರ,ಮೂತ್ರ ಸರಿಯಾಗಿ ಆಗದಿರುವುದಕ್ಕೆ,ತಾಳಂಗಳಕ್ಕೆ ಗಿಡಮೂಲಿಕೆ ಔಷಧವನ್ನು ರಾಮಯ್ಯ ಶೆಟ್ಟಿ ಅವರು ನೀಡುತ್ತಾರೆ.
ಕಿಡ್ನಿ ಮತ್ತು ಪಿತ್ತಕೋಶದಲ್ಲಿ ಆಗುವ ಕಲ್ಲಿಗೆ,ಉರಿ ಮೂತ್ರಕ್ಕೆ ನಾಟಿ ಔಷಧವನ್ನು ಸಹ ರಾಮಯ್ಯ ಶೆಟ್ಟರು ನೀಡುತ್ತಾರೆ ಅವರ ಸಂಪರ್ಕ ಮೊಬೈಲ್ ಸಂಖ್ಯೆ-9663263545























































































































































































































































































































































































































































































































































































































































































































































































































































































































































































































































































































































































































































































































































































































































































