ನಾವುಂದ-ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ


ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮದ ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಚಂಡಿಕಾ ಹೋಮ ಹಾಗೂ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ,ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ದುರ್ಗಾದೀಪ ನಮಸ್ಕಾರ ಪೂಜೆ,ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಭಾನುವಾರ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಭಾಸ್ಕರ ಪುತ್ರನ್ ಮಾತನಾಡಿ,ಬೊಬ್ಬರ್ಯ ದೇವಸ್ಥಾನ ಮತ್ತು ರಾಮ ಮಂದಿರ ನಿರ್ಮಾಣ ಮಾಡಬೇಕ್ಕೆನ್ನುವ ಸಂದರ್ಭದಲ್ಲಿ ಎದುರಾದ ವಿಘ್ನದಿಂದ ಪ್ರಶ್ನಾ ಚಿಂತೆಯನ್ನು ಮಾಡಿದಾಗ.ಪ್ರಶ್ನಾ ಚಿಂತನದಲ್ಲಿ ಗೋಚರಿಸಿದಂತೆ ಸುಮಾರು 800 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ದೇವಿ ಚೈತನ್ಯ ನಶೀಸಿ ಹೋಗಿರುವುದು ಕಾಣಿಸಿದೆ,ಕೆಂಪು ಕಲ್ಲಿನ ಪುಷ್ಕರಣಿ ಇಲ್ಲಿ ಇದ್ದಿದ್ದು ಅದು ಮುಚ್ಚಿಹೋಗಿರುವುದಾಗಿ ಕಂಡು ಬಂದಿದೆ.ಪ್ರಶ್ನೆ ಚಿಂತನಾ ಮೊದಲು ಇಲ್ಲಿ ದೇವಿ ಸಾನಿಧ್ಯ ಇರುವುದು ಯಾರಿಗೂ ತಿಳಿದಿರಲಿಲ್ಲ ಎಂದರು.ಪ್ರಶ್ನಾ ಚಿಂತನೆ ಯಂತೆ ಶೋಧನೆ ಮಾಡಿದಾಗ ದೇವಾಲಯ ಇರುವಂತಹ ಕುರುಹು ಬಹಳಷ್ಟು ಸಿಕ್ಕಿವೆ.ದೇವರ ಡಬ್ಬಿಯಲ್ಲಿ ರಾಣಿ ಎಲಿಜೆಬೆತ್ ಕಾಲದ ಚಿನ್ನದ ನಾಣ್ಯ ಸಿಕ್ಕದೆ ಪೂರಕವಾಗಿ ಎಂಬಂತೆ ಶಿಲಾಶಾಸನ ಕೂಡ ದೊರೆತ್ತಿದೆ ಎಂದರು.2019 ರಲ್ಲಿ ದೇವರ ಪ್ರತಿಷ್ಠಾ ಕಾರ್ಯವನ್ನು ಮಾಡಲಾಗಿದೆ.ಹಣ ಕೊರತೆಯಿಂದ ಪದ್ಮಾವತಿ ಅಮ್ಮನವರ ದೇವಾಂಲಯದ ಕೆಲಸ ಕಾರ್ಯಗಳು ಬಾಕಿ ಇದೆ.ರಾಮ ಮಂದಿರ ನಿರ್ಮಾಣ ಅರ್ಧಕ್ಕೆ ನಿಂತಿದೆ.ದೇವಸ್ಥಾನದ ಪೂರ್ಣ ಕೆಲಸವಾಗಲು ಹಣದ ಅವಶ್ಯಕತೆ ಬಹಳಷ್ಟು ಇರುವುದರಿಂದ ಊರ ಪರಊರಿನ ಭಕ್ತರು,ದಾನಿಗಳು,ಸಮಾಜ ಬಾಂಧವರು,ಸರಕಾರ,ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಕೇಳಿಕೊಂಡರು.
ದೇವಸ್ಥಾನದ ಪ್ರಧಾನ ಅರ್ಚಕಾರದ ವೇ.ಮೂ ಪರಮೇಶ್ವರ ಅಡಿಗ ಅವರು ಮಾತನಾಡಿ,ಬಹಳಷ್ಟು ಇತಿಹಾಸವನ್ನು ಹೊಂದಿರುವ ಬೊಬ್ಬರ್ಯ ಮತ್ತು ದೇವಿ ಸಾನಿಧ್ಯ ಇರುವ ಇವೊಂದು ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಬಹಳಷ್ಟು ಬಾಕಿ ಇವೆ,ಸದ್ಭಕ್ತರು ಕೈ ಜೋಡಿಸಬೇಕು ಎಂದರು.ಶರನ್ನವರಾತ್ರಿ ಉತ್ಸವ ಆಚರಣೆ ಮತ್ತು ಚಂಡಿಕಾ ಹೋಮದ ಪಾವಿತ್ರತೆ ಬಗ್ಗೆ ವಿವರಿಸಿದರು.
ಈ ಸಂದರ್ಭ ದೇವಸ್ಥಾನದ ಗೌರವಾಧ್ಯಕ್ಷರಾದ ಪಿ.ನಾರಾಯಣ ಖಾರ್ವಿ ಮತ್ತು ನಾಗೇಶ ಪುತ್ರನ್,ಕಾರ್ಯದರ್ಶಿ ರತ್ನಾಕರ ಖಾರ್ವಿ,ಕೋಶಾಧಿಕಾರಿ ಸತೀಶ ಶ್ರೀಯಾನ್,ಮಾಜಿ ಅಧ್ಯಕ್ಷರಾದ ಗೋವಿಂದ ಡಿ ಮಸ್ಕಿ,ಸಮಿತಿ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

ವಿಶೇಷ.ಸೂಚನೆ-ದೆವಸ್ಥಾದ ಜೀರ್ಣೋದ್ಧಾರ ಕೆಲಸಗಳು ಬಹಳಷ್ಟು ಬಾಕಿ ಉಳಿದಿದ್ದು,ಈ ಕಾಮಗಾರಿ ಕೆಲಸಕ್ಕೆ ಭಕ್ತರು ದೇಣಿಗೆಯನ್ನು ಈ ಖಾತೆ ಕಳುಹಿಸಬಹುದು.
ದೇವಸ್ಥಾನದ ಎಸ್.ಬಿ ಖಾತೆ ಸಂಖ್ಯೆ -01732200144774
ಐಎಫ್ ಎಸ್ಪಿ ಕೋಡ್ -CNRB0010173
Bank -canara bank nauvnda
























































































































































































































































































































































































































































































































































































































































































































































































































































































































































































































































































































































































































































































































































































































































































