ತಲ್ಲೂರು:ಕಾಂಗ್ರೆಸ್ ಪಕ್ಷದ ಮುಖಂಡರಾದ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

Share

ಕುಂದಾಪುರ:ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಪದವಿಯನ್ನು ಬಯಸದಿರುವ ಶೇಖರ್ ಪೂಜಾರಿ ತಲ್ಲೂರು ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದಾರೆ ಅವರ ಪಕ್ಷ ನಿಷ್ಠೆ ಇತರರಿಗೂ ಪ್ರೇರಣೆ ಆಗಿರುವಂತಹದ್ದು.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ನಷ್ಟವಾಗಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ತಲ್ಲೂರು ಮೂರ್ತೇದಾರ ಸಭಾಭವನದಲ್ಲಿ ಭಾನುವಾರ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧರಾದ ಕಾಂಗ್ರೆಸ್ ಪಕ್ಷದ ಮುಖಂಡ ಆಟೋ ಚಾಲಕ ಶೇಖರ ಪೂಜಾರಿ ಅವರ ಭಾವ ಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ರಾಜಕೀಯ ವಿರೋಧಿಗಳೆ ಇಲ್ಲದ ಅಜಾತ ಶತ್ರು ಶೇಖರ್ ಪೂಜಾರಿ ಅವರ ಅಗಲುವಿಕೆಯಿಂದ ಇಡಿ ಊರೆ ಮರುಗಿದೆ ಇದು ಅವರು ಗಳಿಸಿದ ಪ್ರೀತಿಯ ಸಂಕೇತವಾಗಿದೆ ಎಂದರು.
ಶ್ರೀಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು ಉಪಾಧ್ಯಕ್ಷರಾದ ಉದ್ಯಮಿ ರಾಜೇಶ ಕಾರಂತ ಉಪ್ಪಿನಕುದ್ರು ಮಾತನಾಡಿ,ಜಾತಿ,ಧರ್ಮ ಭೇದಭಾವ ಇಲ್ಲದ ಮನೋಭಾವವನ್ನು ಹೊಂದಿದ್ದ ಶೇಖರ ಪೂಜಾರಿ ಅವರ ಬದುಕಿನ ದಿನಗಳು ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಸೇವೆಗೆಂದೇ ಮೀಸಲಾಗಿದೆ ಅವರದ್ದು ಮನುಷ್ಯತ್ವದ ಗುಣಗಳನ್ನು ಹೊಂದಿರುವ ಹೃದಯವಾಗಿತ್ತು ಎಂದು ಅವರ ನಡುವಿನ ಒಡನಾಟದ ಎಳೆಯನ್ನು ಬಿಚ್ಚಿಟ್ಟರು.

ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆನಂದ ಬಿಲ್ಲವ ಮಾತನಾಡಿ,ಸಮಾನ ಮನಸ್ಸನ್ನು ಹೊಂದಿರುವ ಒಬ್ಬ ನಿಷ್ಠಾವಂತ ಒಡನಾಡಿಯನ್ನು ಕಳೆದುಕೊಂಡಿರುವುದು ಬಹಳಷ್ಟು ದುಖ:ವಾದ ಸಂಗತಿ ಆಗಿದೆ.ಮಾನವೀಯ ಗುಣಗಳನ್ನೇ ಮೈಗೂಡಿಸಿಕೊಂಡಿರುವ ಅಂತಹ ವ್ಯಕ್ತಿಯನ್ನು ಮತ್ತೆ ನೋಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಟಿ.ಬಿ ಶೆಟ್ಟಿ ತಲ್ಲೂರು,ಶ್ರೀಮಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ವಸಂತ.ಆರ್ ಹೆಗ್ಡೆ,ಆನಂದ ಬಿಲ್ಲವ,ತಲ್ಲೂರು ಪಂಚಾಯಿತಿ ಅಧ್ಯಕ್ಷ ಗಿರೀಶ್ ನಾಯಕ್,ಮಾಜಿ ತಾ.ಪಂ ಸದಸ್ಯ ಕರುಣಾಕರ ಪೂಜಾರಿ,ಉದ್ಯಮಿ ಅರುಣ್ ಮೆಂಡೊನ್ಸಾ,ಪಂಚಾಯಿತಿ ಸದಸ್ಯರಾದ ಚಂದ್ರ ದೇವಾಡಿಗ,ಜುಡಿನ್ ಮೆಂಡೊನ್ಸಾ,ತಲ್ಲೂರು ಆಟೋ ಮಾಲೀಕರು ಮತ್ತು ಚಾಲಕ ಸಂಘದ ಪ್ರತಿನಿಧಿ ಚಂದ್ರ ಪೂಜಾರಿ,ಉದಯ ಕುಮಾರ್ ತಲ್ಲೂರು,ಗ್ರಾಮಸ್ಥರು,ಆಟೋ ಸಂಘದ ಸದಸ್ಯರು ಉಪಸ್ಥಿತರಿದ್ದರು.ಅಕಾಲಿಕವಾಗಿ ನಿಧನರಾದ ಕಾಂಗ್ರೆಸ್ ಮುಖಂಡ ಆಟೋ ಚಾಲಕ ಶೇಖರ ಪೂಜಾರಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಲಾಯಿತು.ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.ದೇವರಾಜ್ ಪೂಜಾರಿ ನಿರೂಪಸಿ,ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page