ಗಂಗೊಳ್ಳಿ:ಶ್ರೀ ಶಾರದಾ ದೇವಿ ವಿಗ್ರಹ ಪ್ರತಿಷ್ಠಾಪನೆ
ಕುಂದಾಪುರ:ಸೇವಾ ಸಂಘ,ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ಆಚರಿಸಲ್ಪಡುತ್ತಿರುವ 49ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶಾರದಾ ದೇವಿ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಶುಕ್ರವಾರ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆಯನ್ನು ನೆರವೇರಿಸಲಾಯಿತು.ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಾರದಾ ದೇವಿ ವಿಗ್ರಹವನ್ನು ಅ.25 ರಂದು ಪುರಮೆರವಣಿಗೆ ಮೂಲಕ ಜಲಸ್ಥಂಭನ ಮಾಡಲಾಗುತ್ತದೆ.

ಶ್ರೀ ಶಾರದಾ ದೇವಿಗೆ ಚಂಡಿಕಾಯಾಗ ಸಮರ್ಪಣೆ
ಸೇವಾ ಸಂಘ,ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ವತಿಯಿಂದ ಶ್ರೀ ಶಾರದಾ ಮಂಟಪದಲ್ಲಿ ನಡೆಯುತ್ತಿರುವ 49ನೇ ವರ್ಷದ ಶಾರದಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶಾರದಾ ದೇವಿಗೆ ಲೋಕ ಕಲ್ಯಾಣಾರ್ಥ ಹಾಗೂ ಶ್ರೀ ದೇವಿಯ ಪ್ರೀತ್ಯರ್ಥವಾಗಿ ಚಂಡಿಕಾಯಾಗವನ್ನು ಶನಿವಾರ ಸಮರ್ಪಣೆ ಮಾಡಲಾಯಿತು.
ವೇ.ಮೂ ಜಿ.ರಾಘವೇಂದ್ರ ಆಚಾರ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು.ಶ್ರೀ ಶಾರದೋತ್ಸವ ಸಮಿತಿ ಮತ್ತು ಮಹಿಳಾ ಮಂಡಳಿ ಪದಾಧಿಕಾರಿಗಳು,ಸದಸ್ಯರು,ಸ್ಥಳೀಯರು, ಭಜಕರು, ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































