ಗುಜ್ಜಾಡಿ:ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನ ಬೆಣ್ಗೆರೆ ಗುಜ್ಜಾಡಿ

ಕುಂದಾಪುರ:ನಂಬಿದ ಕುಟುಂಬಸ್ಥರು ಮತ್ತು ದಾನಿಗಳ ಸಹಕಾರದಿಂದ ಸುಮಾರು 2 ಕೋಟಿ.ಗೂ ಅಧಿಕ ಹಣವನ್ನು ವೆಚ್ಚ ಮಾಡಿ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀಜಟ್ಟಿಗೇಶ್ವರ ಮತ್ತು ಭದ್ರಕಾಳಿ ಸಪರಿವಾರ ಗರಡಿ ದೇವಸ್ಥಾನವನ್ನು ಕಳೆದ ಐದು ವರ್ಷಗಳ ಹಿಂದೆ ಜೀರ್ಣೋದ್ಧಾರ ಕೆಲಸವನ್ನು ಮಾಡಲಾಗಿದೆ.ಸಾರ್ವಜನಿಕರು ಮತ್ತು ಊರಿನವರಿಗೆ ಹಾಗೂ ಭಕ್ತರಿಗೆ ಅನುಕೂಲ ವಾಗುವ ದೃಷ್ಟಿಯಿಂದ ಸಭಾಭವನವನ್ನು ನಿರ್ಮಿಸಲಾಗಿದ್ದು ಹಣ ಕೊರತೆಯಿಂದ ಕಟ್ಟಡದ ನಿರ್ಮಾಣದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಸಭಾಭವನದ ನಿರ್ಮಾಣದ ಕೆಲಸವ್ನನು ಪೂರ್ಣಗೊಳಿಸಲು ಸರಕಾರ ಮತ್ತು ದಾನಿಗಳು,ಭಕ್ತಾದಿಗಳು ಸಹಕಾರವನ್ನು ನೀಡಬೇಕೆಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಬಾಬು.ಜೆ ಪೂಜಾರಿ ಉಪ್ಪುಂದ ಅವರು ಕೇಳಿಕೊಂಡರು.
ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇವಸ್ಥಾನದಲ್ಲಿ ಸುಸಜ್ಜಿತವಾದ ಸಭಾಭವನ ನಿರ್ಮಾಣವಾದರೆ ಮದುವೆ,ಧಾರ್ಮಿ ಕಾರ್ಯಕ್ರಮಗಳು,ಸಭಾ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಕ್ರಗಳನ್ನಯ ಆಯೋಜನೆ ಮಾಡಲು ಅನುಕೂಲವಾಗುತ್ತದೆ.ದೇವಸ್ಥಾನದ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಲು ಸರಕಾರ ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮತ್ತೊಮ್ಮೆ ವಿನಂತಿಸಿದರು.ದೂರದ ಊರಿನಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ಸಂಕ್ರಾತಿ ದಿನದಂದು ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ.ಕಳೆದ ಐದು ವಷಗಳಿಂಧ ಶರನ್ನವರಾತ್ರಿ ಉತ್ಸವವನ್ನು ಬಹಳಷ್ಟು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಲ್ಲವೂ ದೇವರ ಅನುಗ್ರಹ ಮತ್ತು ಭಕ್ತಾದಿಗಳ ಸಹಕಾರದಿಂದ ಸಾಧ್ಯ ಎಂದರು.ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಕೆ.ಸುರೇಶ ಪೂಜಾರಿ ಚಿತ್ತೂರು,ಮಾಹಬಲ ದೇವಾಡಿಗ,ಪಾತ್ರಿಗಲಾದ ನಾರಾಯಣ ಪೂಜಾರಿ ಕೊಡಪಾಡಿ,ಅರ್ಚಕರಾದ ಚಿಕ್ಕಯ್ಯ ಪೂಜಾರಿ,ನರಸಿಂಹ ಪೂಜಾರಿ ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































