ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣ:ಡಾ.ಹೆಚ್.ಎಸ್ ಶೆಟ್ಟಿ

Share

ಕುಂದಾಪುರ:ಗಂಗೊಳ್ಳಿ ಬಂದರಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಅವಕಾಶಗಳನ್ನು ಬಳಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಪನ್ಮೂಲವನ್ನು ಬಳಸಿಕೊಂಡು ಬೈಂದೂರು ಕ್ಷೇತ್ರದಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಗೊಂಡರೆ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುದರ ಜತೆಗೆ ವಲಸೆ ಪರ್ವಕ್ಕೆ ನಿಯಂತ್ರಣ ಹೇರಿದಂತೆ ಆಗುತ್ತದೆ ಎಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹೇಳಿದರು.ತ್ರಾಸಿ ಕೊಂಕಣ ಖಾರ್ವಿ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭ,300 ಟ್ರೀಸ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಮೃದ್ಧ ಬೈಂದೂರು ಅನಾವರಣ ಕಾರ್ಯಕ್ರಮದಲ್ಲಿ ಅಭಿನಂದನಾ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ದೇಶ,ಸಮಾಜ ಕಟ್ಟಬೇಕಾದರೆ ಮಾತ್ರ ಭಾಷೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಸರಕಾರ ನೀಡಬೇಕು.ಪೆÇೀಷಕರು ಮಕ್ಕಳಿಗೆ ಸಂಸ್ಕಾರ,ಶಿಕ್ಷಣವನ್ನು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.300 ಟ್ರೀಸ್ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳ ಉಳುವಿಗೆ ವಿನೂತ ರೀತಿಯಲ್ಲಿ ಸಂಕಲ್ಪ ಮಾಡಿರುವುದು ಗ್ರಾಮೀಣ ಪ್ರದೇಶ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯನ್ನು ವಹಿಸಿದ್ದರು,ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ,ಚಂದ್ರಶೇಖರ ಶೆಟ್ಟಿ ಕೆರಾಡಿ,ಡಾ.ಅಣ್ಣಪ್ಪ ಶೆಟ್ಟಿ,ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ,ರಾಮಕೃಷ್ಣ ಶೇರಿಗಾರ್,ಶಾಂತಾರಾಮ್ ಶೆಟ್ಟಿ,ಜನಾರ್ದನ ದೇವಾಡಿಗ ಉಪಸ್ಥಿತರಿದ್ದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಸೈನ್ಸ್ ಗೌರವ ಪುರಸ್ಕøತರಾದ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ (ಡಾ.ಹೆಚ್.ಎಸ್.ಶೆಟ್ಟಿ) ಅವರನ್ನು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಸನ್ಮಾನಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page