ಹೊಸಾಡು:ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ
ಕುಂದಾಪುರ:ಸಂಪನ್ಮೂಲ ಕ್ರೋಢೀಕರಣ,ವಲಸೆ ಕಾರ್ಮಿಕರ ಶಿಕ್ಷಣಕ್ಕೆ ಒತ್ತು,ಅಮೃತಾ ಆರೋಗ್ಯ ಅಭಿಯಾನ,ಶೇ.100 ತ್ಯಾಜ್ಯ ಸಂಗ್ರಹಣೆ,ಮನೆ ಮನೆಗೆ ಕುಡಿಯುವ ನೀರು ಸಂಪರ್ಕ ವ್ಯವಸ್ಥೆ,ಮಕ್ಕಳಿಗಾಗಿ ಪ್ರತ್ಯೇಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ,ಉದ್ಯೋಗ ಖಾತ್ರಿ ಯೋಜನೆ ಪ್ರಗತಿ,15 ನೇ ಹಣಕಾಸು ಯೋಜನೆ ಅನುದಾನಗಳ ಸಮರ್ಪಕ ಬಳಕೆ ಕುರಿತು ವಿಶಿಷ್ಟ ಸಾಧನೆ ಮಾಡಿರುವ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿಗೆ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತ್ತಿದೆ.
ಕರ್ನಾಟಕ ಸರಕಾರ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಹೊಸಾಡು ಪಂಚಾಯಿತಿ ಆಡಳಿತಾಧಿಕಾರಿ ರಘುರಾಮ ಶೆಟ್ಟಿ ಮತ್ತು ಪಿಡಿಒ ಪಾರ್ವತಿ,ಸಿಬ್ಬಂದಿ ಶಿವಾನಂದಾ ಪ್ರಶಸ್ತಿಯನ್ನು ಸ್ವೀಕರಿಸಿದರು.ಹೊಸಾಡು ಪಂಚಾಯಿತಿಗೆ ಒಲಿದ ಇದು ನಾಲ್ಕನೇ ಗಾಂಧಿ ಗ್ರಾಮ ಪುರಸ್ಕಾರವಾಗಿದೆ.