ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಸಾಮಾನ್ಯ ಸಭೆ:15% ಡಿವಿಡೆಂಟ್ ಘೋಷಣೆ
ಕುಂದಾಪುರ:ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ ಅದರ 2022-23ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆ ವೀರೇಶ ಮಾಂಗಲ್ಯ ಮಂದಿರ ಗಂಗೊಳ್ಳಿಯಲ್ಲಿ ಶನಿವಾರ ನಡೆಯಿತು.ಮುಳುಗುತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಲೈಟ್‍ಹೌಸ್ ಅವರನ್ನು ಸಘದ ವತಿಯಿಂದ ಸನ್ಮಾನಿಸಲಾಯಿತು.
84ನೇ ವರ್ಷದ ಸಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಮಾತನಾಡಿ,ಸಂಘದ ಸದಸ್ಯರು ಮತ್ತು ಠೇವಣಿದಾರರ ಸಹಕಾರದಿಂದ ಸಂಘವು ಅಭಿವೃದ್ಧಿ ಹೊಂದಲು ಸಹಕಾರಿ ಆಗಿದೆ.ಸದಸ್ಯರು ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿ ಸಂಘದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕೇಳಿಕೊಂಡರು.ಪ್ರಸ್ತುತ ವರ್ಷದಲ್ಲಿ 48 ಕೋಟಿ.ರೂ ವಹಿವಾಟು ನಡೆಸಲಾಗಿದ್ದು,40 ಲಕ್ಷ.ರೂ ನಿವ್ವಳ ಲಾಭಾ ಗಳಿಸಲಾಗಿದೆ ಎಂದರು.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 15% ಡಿವಿಡೆಂಟ್ ಘೋಷಣೆ ಮಾಡಿದರು.ಮುಂದಿನ ಯೋಜನೆ ಭಾಗವಾಗಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಗಂಗೊಳ್ಳಿ ಪೇಟೆಯಲ್ಲಿ 13ಸೆಂಟ್ಸ್ ಜಾಗವನ್ನು ಖರೀದಿಸಲಾಗಿದೆ.ಇದರ ಜತೆಗೆ ಕುಂದಾಪುರ ಭಾಗದ ಜನರಿಗೆ ಉತ್ತಮ ರೀತಿಯ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಹವಾನಿಯಂತ್ರಿತ ಹೊಸ ಶಾಖೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.ಈ ಸಂದರ್ಭ ಉಪಾಧ್ಯಕ್ಷ ಸೂರಜ್ ಖಾರ್ವಿ,ನಿರ್ದೇಶಕರಾದ ಹರೀಶ್ ಖಾರ್ವಿ,ಚಂದ್ರ,ಮೋಹನ್ ಖಾರ್ವಿ,ಗುರುರಾಜ್ ಖಾರ್ವಿ,ನಾಗ ಖಾರ್ವಿ,ರಾಜೇಶ್ ಸಾರಂಗ್,ಜ್ಯೋತಿ ಆರ್,ಸರೋಜಿನಿ,ಸುಮತಿ ಉಪಸ್ಥಿತರಿದ್ದರು.ಸಂಘದ ವ್ಯವಸ್ಥಾಪಕ ಮೋಹನ್ ಖಾರ್ವಿ ಆಡಳಿತ ವರದಿಯನ್ನು ಓದಿ ಹೇಳಿದರು.ಕೇಶವ ಖಾರ್ವಿ ನಿರೂಪಿಸಿದರು.ಸಿಇಒ ರವಿಚಂದ್ರ ಖಾರ್ವಿ ವಂದಿಸಿದರು.ಸಂಘದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.
2022-23 ನೇ ಸಾಲಿನಲ್ಲಿ ಸಹಕಾರ ಕ್ಷೇತ್ರದ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಅತ್ಯುತ್ತಮ ಸಹಕಾರಿ ಸಂಘಕ್ಕೆ ನೀಡುವ ಸಾಧನಾ ಶ್ರೀ ನೀಡಿ ಗೌರವಿಸಿದೆ .
(ಮುಳುಗುತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಲೈಟ್‍ಹೌಸ್ ಅವರನ್ನು ಸಘದ ವತಿಯಿಂದ ಸನ್ಮಾನಿಸಲಾಯಿತು)