ಸ್ನೇಹ ಸಂಘ ಗಣೇಶೋತ್ಸವ ಸಮಿತಿ ಹೊಸಪೇಟೆ ತ್ರಾಸಿ, ಸಂಭ್ರಮದ ಗಣೇಶ ಚೌತಿ ಆಚರಣೆ
ಕುಂದಾಪುರ:-ಸ್ನೇಹ ಸಂಘ ತ್ರಾಸಿ – ಹೊಸಪೇಟೆ ಗಣೇಶೋತ್ಸವ ಸಮಿತಿ ವತಿಯಿಂದ 28ನೇ ವರ್ಷದ ಗಣೇಶ ಚೌತಿ ಹಬ್ಬ ಅನ್ನದಾನ ಸೇವೆ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ನಡೆಯಿತು.
ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಶುಭ ಮುಹೂರ್ತದಲ್ಲಿ ವಿಘ್ನ ನಿವಾರಕ ನಾದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ನಾನಾ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಪೂಜಿಸಿ ಗಣೇಶ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಜಲ ಸ್ತಂಭನ ಮಾಡಲಾಗುತ್ತದೆ.
ಸ್ನೇಹ ಸಂಘ ಹೊಸಪೇಟೆ ತ್ರಾಸಿ ವತಿಯಿಂದ ಕಳೆದ 28 ವರ್ಷಗಳಿಂದ ಗಣೇಶ ಚೌತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಈ ಪುಣ್ಯ ದೇವತಾ ಕಾರ್ಯದಲ್ಲಿ ಖಾರ್ವಿ ಸಮುದಾಯದವರು ಹಾಗೂ ಊರಿನ ಸಾರ್ವಜನಿಕರು ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು,
ಈ ಸಂದರ್ಭ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಹಾಗೂ ಮಕ್ಕಳ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು.






















































































































































































































































































































































































































































































































































































































































































































































































































































































































































































































































































































































































































































































































































































































































































