ಮಲ್ಪೆ:ವಿಶ್ವ ಸಮುದ್ರ ಸ್ವಚ್ಛತಾ ದಿನಾಚರಣೆ

ಉಡುಪಿ:ರೀಫ್ ವಾಚ್ ಮರೈನ್ ಕನ್ಸರ್ವೇಷನ್,ಹೆಚ್.ಸಿ. ಎಲ್ ಫೌಂಡೇಶನ್, ಅರಣ್ಯ ಇಲಾಖೆ ಮತ್ತು ಉಡುಪಿ ನಗರ ಸಭೆ,ಫಿಷರ್ಮೆನ್ ಅಸೋಸಿಯೇಷನ್ ವತಿಯಿಂದ ವಿಶ್ವ ಸಮುದ್ರ ದಿನಾಚರಣೆ ಅಂಗವಾಗಿ ಮಲ್ಪೆಯಲ್ಲಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ನಗರ ಪಾಲಿಕೆಯ ಆಯುಕ್ತರಾದ ರಾಯಪ್ಪ ಅವರು ಸಾಂದರ್ಭಿಕ ಕಡಲಾಮೆಯನ್ನು ಬಲೆಗಳಿಂದ ರಕ್ಷಿಸುವ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿ,ತಾಜ್ಯಗಳನ್ನು ಮನೆಯಲ್ಲೇ ಸುಲಭ ರೀತಿಯಲ್ಲಿ ವಿಲೇವಾರಿ ಮಾಡಬಹುದು ಎಂದರು.
ಈ ವೇಳೆ ಮಾತನಾಡಿದ ನಗರ ಸಭೆಯ ಸದಸ್ಯರಾದ ಯೆಡ್ಲೀನ್ ಕರ್ಕಡ ಅವರು ಕಡಲ ತೀರದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ಇದರಿಂದ ಆದರೂ ಸ್ವಲ್ಪಮಟ್ಟಿಗೆ ಅರಿವು ಆಗಬೇಕು ಎಂದರು.
ಇನ್ನೋರ್ವ ನಗರ ಸಭೆಯ ಸದಸ್ಯರಾದ ಶ್ರೀಲಕ್ಷ್ಮೀ ಮಂಜುನಾಥ್ ಅವರು ಮಾತನಾಡಿ ,ತಾಜ್ಯ ವಿಲೇವಾರಿಗೆ ಬಗ್ಗೆ ಸ್ಥಳೀಯ ಜನರಿಗೆ ಅರಿವು ಮೂಡಿಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ದಯಾನಂದ ಕೆ ಸುವರ್ಣ ಅವರು ತಾಜ್ಯಗಳ ಸಮಸ್ಯೆ ತಮ್ಮ ಬಾಲ್ಯದಲ್ಲಿ ಇರಲಿಲ್ಲ ಆದರೆ ಈಗ ಇದೊಂದು ಸಮಸ್ಯೆಯಾಗಿಹೋಗಿದೆ ಇಂದಿನ ಯುವ ಜನರು ಜಗೃತರಾಗಬೇಕು ಇದರಿಂದ ಕಾರ್ಯ ಪ್ರವೃತರಾಗಬೇಕು ಎಂದರು.
ಇದೆ ವೇಳೆ ರೋಹಿತ್ ಬೈಕಾಡಿ ಅವರ ನಿರ್ದೇಶನದಲ್ಲಿ ಮಂದಾರ ತಂಡವು ಕಡಲಾಮೆ ಮತ್ತು ಕಡಲ ಜೀವಿ ರಕ್ಷಣೆಯ ಕಿರು ನಾಟಕ ರಂಗ ಪ್ರಯೋಗ ಮಾಡಿತು,ನಂತರ ಸಮುದ್ರದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ,ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಗುರುರಾಜ್ ಮತ್ತು ಫಿಶರ್ಮೆನ್ ನ ರವಿರಾಜ್ ಅವರು ಶುಭಹಾರೈಸಿದರು ಇದೆ ವೇಳೆ ಬಾಲಕರ ಶ್ರೀ ರಾಮ ಮಂದಿರದ ಲಕ್ಷ್ಮಣ ಕರ್ಕೇರ,ಸಂತೋಷ್ ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ನ ಉಪನ್ಯಾಸಕರು ಮತ್ತು ಮಕ್ಕಳು,ನಾರಾಯಣ ಗುರು ಪ್ರೌಢ ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು ಶ್ರಮದಾನ ಮಾಡಿದರು.
ಈ ವೇಳೆ ರೀಫ್ ವಾಚ್ ನ ರಿವಿಲ್ ಸ್ಟೀಫನ್ ಅವರು ಪ್ರಾಸ್ತಾವಿಕ ಮಾತನಾಡಿದರೆ ವಿಘ್ನೇಶ್ ಅವರು ನಿರೂಪಿಸಿ,ವೆಂಕಟೇಶ್ ಅವರು ವಂದಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































