ತ್ರಾಸಿ:ಮೋದಿ ಜನ್ಮದಿನಾಚರಣೆ,ಉಚಿತ ಆಟೋ ಸೇವೆ
ಬೈಂದೂರು:ದೇಶದ ಜನಪ್ರೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಮೋದಿ ಅಭಿಮಾನಿ ತ್ರಾಸಿ ಆಟೋ ಸ್ಟ್ಯಾಂಡ್ ಚಾಲಕ ಉದಯ ಖಾರ್ವಿ ಅವರು ಉಚಿತ ಆಟೋ ಸೇವೆಯನ್ನು ಭಾನುವಾರ ನೀಡಿದರು.
ಆಟೋ ಚಾಲಕ ಉದಯ ಖಾರ್ವಿ ಅವರು ಕಳೆದ ನಾಲ್ಕು ವರ್ಷಗಳಿಂದ ನರೇಂದ್ರ ಮೋದಿ ಅವರ ಜನ್ಮ ದಿನದಂದು ತ್ರಾಸಿ ಮತ್ತು ಸುತ್ತಮುತ್ತಲಿನ 15.ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಉಚಿತ ಆಟೋ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.ಮೋದಿ ಮೇಲಿನ ಅಭಿಮಾನದಿಂದ ಇವೊಂದು ಸೇವೆಯನ್ನು ನೀಡುತ್ತಾ ಬಂದಿದ್ದೇನೆ ಎಂದು ಅವರು ಹೇಳುತ್ತಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































