ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ

Share

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉಪನಿರ್ದೇಶಕರ ಕಛೇರಿ ಬೈಂದೂರು,ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಜನತಾ ಪ್ರೌಢಶಾಲೆ ಹೆಮ್ಮಾಡಿ ಆಶ್ರಯದಲ್ಲಿ 2023-24ನೇ ಸಾಲಿನ ಬಾಲಕ-ಬಾಲಕಿಯರ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಶುಕ್ರವಾರ ನಡೆಯಿತು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು,ಜನತಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ ದೇವಾಡಿಗ,ಕಟ್‍ಬೇಲ್ತೂರು ಗ್ರಾ.ಪಂ ಅಧ್ಯಕ್ಷೆ ವೈಶಾಲಿ,ಉಪಾಧ್ಯಕ್ಷ ಕೆ.ರಾಮ ಶೆಟ್ಟಿ,ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ,ಬೈಂದೂರು ವಲಯ ದೈ.ಶಿ.ಶಿ ಸಂಘದ ಕಾರ್ಯದರ್ಶಿ ಗುರುರಾಜ ಎಸ್,ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಹೆಗ್ಡೆ,ದೈ.ಶಿ.ಶಿ ಸಂಘ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ,ಸತ್ಯನಾರಾಯಣ ಜಿ,ಪ್ರಭಾಕರ,ಸುರೇಂದ್ರ ಶೆಟ್ಟಿ,ಮಂಜುನಾಥ್ ಭಟ್,ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ್ ಮೊಗವೀರ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಕುಲಾಲ್,ಪ್ರಸಾದ್ ಆಚಾರ್ಯ,ಚಂದ್ರ ಪಿ ಉಪಸ್ಥಿತರಿದ್ದರು.ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ರತನ್,ರಿತೇಶ್,ರೋಹಿತ್ ಅವರನ್ನು ಅಭಿನಂದಿಸಲಾಯಿತು.ಬೈಂದೂರು ವಲಯ ದೈ.ಶಿ.ಶಿ ಪರೀವಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಶಿಕ್ಷಕ ಮಂಜು ಕಾಳವಾರ ಸ್ವಾಗತಿಸಿದರು.ಶಿಕ್ಷಕ ಜಗದೀಶ ಶೆಟ್ಟಿ ನಿರೂಪಿಸಿದರು.ಶಿಕ್ಷಕ ದೇವೇಂದ್ರ ನಾಯ್ಕ್ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page