ಹೆಮ್ಮಾಡಿ ಜನತಾ ಕಾಲೇಜಿನಲ್ಲಿ,ಜನತಾ ಚಿತ್ತಾರ-ಪ್ರತಿಭಾ ದಿನಾಚರಣೆ
ಕುಂದಾಪುರ:ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಾಗ ಮಾತ್ರ ಅವರೊಳಗೆ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಿದೆ.ಶೈಕ್ಷಣಿಕ ಚಟುವಟಿಕೆ ಜತೆಗೆ ಸಾಂಸ್ಕ್ರತಿಕ,ಕಲೆಗೆ ಒತ್ತನ್ನು ನೀಡುವುದರಿಂದ ಒತ್ತಡ ರಹಿತವಾಗಿ ಶಿಕ್ಷಣವನ್ನು ಪಡೆಯಲು ಸಹಕಾರಿ ಆಗುತ್ತದೆ ಎಂದು ಆರ್.ಜೆ ನಯನಾ ಅಭಿಪ್ರಾಯಪಟ್ಟರು.
ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜನತಾ ಚಿತ್ತಾರ-ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷರಾದ,ಪ್ರಿನ್ಸಿಪಾಲ್ ಗಣೇಶ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಕುಂದಗನ್ನಡ ಶೈಲಿಯಲ್ಲಿ ಹಾಸ್ಯ ಭರಿತವಾಗಿ ಮಾತನಾಡಿದರು,ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್ ಶುಭ ಹಾರೈಸಿದರು.ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳವಾರ ಉಪಸ್ಥಿತರಿದ್ದರು.ತೀರ್ಪುಗಾರರಾಗಿ ಕೆ.ಪಿ.ಎಸ್ ಕೋಟೇಶ್ವರ ಸಹ ಶಿಕ್ಷಕ ರಮಾನಂದ ನಾಯ್ಕ್,ಆಲೂರು ಶಾಲೆ ಶಿಕ್ಷಕಿ ನಾಗರತ್ನಾ ಜಿ,ಬಸ್ರೂರು ಪ್ರೌಢಶಾಲೆ ಸಹ ಶಿಕ್ಷಕಿ ಅರ್ಪಣಾ ಹೆಗ್ಡೆ,ಹೆಮ್ಮಾಡಿ ಜನತಾ ಶಾಲೆಯ ಶಿಕ್ಷಕ ಜಗದೀಶ್ ಭಾಗವಹಿಸಿದ್ದರು.ವೈಯಕ್ತಿಕ ಮತ್ತು ಸಾಮೂಹಿಕ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪ್ರಿನ್ಸಿಪಾಲ್ ಗಣೇಶ ಮೊಗವೀರ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ ವಂದಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































