ಜೀವಂತ ಹಾವುಗಳೊಂದಿಗೆ ನಾಗರ ಪಂಚಮಿ ಆಚರಣೆ
ಉಡುಪಿ:ಉರಗ ಚಿಕಿತ್ಸಕರು ಹಾಗೂ ರಕ್ಷಕರಾದ ಮಜೂರು ಗೊವರ್ಧನ ಭಟ್ ಪ್ರತೀ ವರ್ಷದಂತೆ ಈ ಬಾರಿಯೂ ನಾಗರ ಪಂಚಮಿಯಂದು ಎರಡು ಜೀವಂತ ನಾಗರಹಾವುಗಳಿಗೆ ಜಲಾಭಿಷೇಕ ಮಾಡುವುದರೊಂದಿಗೆ ತನು ಹೊಯ್ದು ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ.
ಉರಗ ತಜ್ಞರಾಗಿರುವ ಗೋವರ್ಧನ್ ಭಟ್ ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸ ಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ರಿಕ್ಷಾದ ಅಡಿಗೆ ಬಿದ್ದಿದ್ದ ಒಂದು ಹಾವು ಮತ್ತು ನಾಯಿ ಕಚ್ಚಿ ಗಾಯಗೊಳಿಸಿದ್ದ ಇನ್ನೊಂದು ಹಾವು ಸಹಿತ ಎರಡು ಹಾವುಗಳನ್ನು ತಮ್ಮಮನೆಯಲ್ಲಿಟ್ಟು ಶುಶ್ರೂಷೆ ನೀಡುತ್ತಿದ್ದು ಆ ಹಾವುಗಳಿಗೆ ಇಂದು ಜಲಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿ ಮನೆಮಂದಿಯೊಂದಿಗೆ ನಾಗರ ಪಂಚಮಿ ಆಚರಿಸಿದರು





















































































































































































































































































































































































































































































































































































































































































































































































































































































































































































































































































































































































































































































































































































































































































