ನಾಗಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ
ಕುಂದಾಪುರ:ಧನ,ಧಾನ್ಯ ಉಳ್ಳವರು ಸಾಮಾಜಿಕ ಮನೋಭಾವ ಬೆಳೆಸಿಕೊಂಡು ಸಮಾಜದಲ್ಲಿನ ಅಶಕ್ತರ ಕಷ್ಟಗಳಿಗೆ ಸ್ಪಂದನೆ ಮಾಡುವ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯನ್ನು ಹೊಂದುತ್ತದೆ.ಇಂದಿನ ಮನುಷ್ಯನ ಜೀವನವು ಹಣದ ಬಲದ ಮೇಲೆ ನಿಂತ್ತಿರುವುದು ಅಪಾಯಕಾರಿ ಆಗಿದೆ ಇದು ದೇವರ ಮೇಲಿನಾ ಭಕ್ತಿ ಮೇಲೆ ಪರಿಣಾಮವನ್ನು ಕೂಡ ಬೀರಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ,ಮುಂಬೈ ಅಧ್ಯಕ್ಷ ರಾಜು ಎಮ್ ಮೆಂಡನ್ ಅಭಿಪ್ರಾಯ ಪಟ್ಟರು.
ಬೈಂದೂರು ತಾಲೂಕಿನ ಮರವಂತೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ನಡೆದ ನಾಗರ ಪಂಚಮಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ನಾಗಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಶ್ರೀಸುಬ್ರಹ್ಮಣ್ಯ ದೇವಸ್ಥಾನ ಮರಂತೆ ಧರ್ಮದರ್ಶಿ ತಿಮ್ಮ.ವಿ ದೇವಾಡಿಗ ಮಾತನಾಡಿ ನಾಗಾನುಗ್ರಹದಿಂದ ಈ ಭೂಮಿ ಸಂಪತ್ತಿನಿಂದ ಕೂಡಿದೆ ಕಲ್ಮಶವಿಲ್ಲದ ಭಕ್ತಿಯಿಂದ ದೇವರನ್ನು ಪೂಜಿಸಿದಾಗ ಮಾತ್ರ ಸಂಪತ್ತು ನಮಗೆ ಒಲಿಯುತ್ತದೆ ಎಂದರು.
ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮರವಂತೆ ಮಹಾರಾಜ ಸ್ವಾಮಿ ವರಾಹ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ್ ಧಾರ್ಮಿಕ ಪ್ರವಚನ ನೀಡಿದರು.ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಮುಖ್ಯ ಕಾರ್ಯ ನಿವಾಹಣಾಧಿಕಾರಿ ಶ್ರೀನಿವಾಸ ಅಡಿಗ ಕಬೈಲ್,ಉದ್ಯಮಿ ಮಂಜುನಾಥ ಸೇನಾಪುರ,ಮೀನುಗಾರಿಕೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಸಿ.ಎಸ್.ಖಾರ್ವಿ ಕೊಡೇರಿ,ಪದ್ಮಾವತಿ ದೇವಾಡಿಗ,ಪ್ರಕಾಶ್ ಪಡಿಯಾರ್ ಉಪಸ್ಥಿತರಿದ್ದರು.ಎಂ.ಗೋವಿಂದ ನಿರೂಪಿಸಿ,ವಂದಿಸಿದರು.
(ಮರವಂತೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು)