ಗೋ ಶಾಲೆ ನಿರ್ಮಾಣಕ್ಕೆ ಗೋ ಪ್ರೇಮಿಗಳ ಆಗ್ರಹ
ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಪ್ರದೇಶವಾದ ಹೊಸಾಡು,ನಾವುಂದ,ಮರವಂತೆ,ಬಾರಂದಾಡಿ,ಗಂಗೊಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಅಧಿಕವಾಗಿದೆ.ರಾತ್ರಿ ಸಮಯದಲ್ಲಿ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳು ರೈತರಿಗೆ ಉಪದ್ರಕಾರಿಯಾಗಿ ಪರಿಣಮಿಸಿವೆ.ಬೀಡಾಡಿ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ನಿಯಂತ್ರಣಕ್ಕೆ ತರಲು ಗೋ ಶಾಲೆ ನಿರ್ಮಾಣ ಮಾಡಬೇಕ್ಕೆನ್ನುವುದು ಸ್ಥಳೀಯರ ಬೇಡಿಕೆ ಆಗಿದೆ.
(ರಾತ್ರಿ ಹಗಲೆನ್ನದೆ ಭತ್ತದ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳಿಂದ ತೊಂದರೆ ಆಗುತ್ತಿದೆ ಎಂಬುದು ರೈತರ ಅಳಲು)
ಜಾನುವಾರು ಸಾಗಾಣಿಕೆಯಲ್ಲಿ ರೈತರು ನಿರುತ್ಸಾಹ ತೋರ್ಪಡಿಸುತ್ತಿದ್ದರಿಂದ ಗೋವುಗಳು ಬೀದಿ ಪಾಲಾಗಿದ್ದು,ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಬಿಡಾಡಿ ಗೋವುಗಳ ತಿರುಗಾಟ ಅಧಿಕವಾಗಿದೆ.ಗಂಡು ಜಾತಿಯ ಗೋವುಗಳನ್ನು ತಿರಸ್ಕಾರದ ಮನೋಭಾವದಿಂದ ನೋಡುತ್ತಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಎತ್ತುಗಳು (ಬಸವ) ಬೀದಿಗಳಲ್ಲಿ ನೆಲೆಸುತ್ತಿವೆ ಇವೊಂದು ಕಾರಣದಿಂದಲೂ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಬೀದಿ ಬದಿಯಲ್ಲಿ ವಾಸ ಮಾಡುತ್ತಿರುವ ಗೋವುಗಳು ಹೆದ್ದಾರಿ ಬದಿಯಲ್ಲಿ ಮಲಗುವುದರಿಂದಲೂ,ರಸ್ತೆ ಮಧ್ಯ ಅಡ್ಡಾದಿಡ್ಡಿ ಒಡಾಡುದರಿಂದಲೂ ವಾಹನಗಳ ಚಕ್ರದಡಿಗೆ ಸಿಲುಕಿ ಗೋವುಗಳು ಮರಣವನ್ನು ಅಪ್ಪುತ್ತಿದ್ದು,ದ್ವಿಚಕ್ರ ವಾಹನ ಸವಾರರ ಜೀವಕ್ಕೂ ಕಂಟಕವಾಗಿ ಪರಿಣಮಿಸಿವೆ.ಗೋವುಗಳಿಗೆ ಸೂಕ್ತವಾದ ನೆಲೆಯನ್ನು ಒದಗಿಸುವ ದೃಷ್ಟಿಯಿಂದ ಗೋ ಶಾಲೆ ನಿರ್ಮಾಣ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕ್ಕೆನ್ನುವುದು ಸಾರ್ವಜನಿಕರ ಒತ್ತಾಯ.