ಸೈಕಲ್‍ನಲ್ಲಿ ದೇಶಾದ್ಯಂತ ಸುತ್ತಿ ಡ್ರಗ್ಸ್ ಜಾಗೃತಿ ಅಭಿಯಾನ

Share

Advertisement
Advertisement

ಕುಂದಾಪುರ:ಗಾಂಜಾ,ಡ್ರಗ್ಸ್‍ನಂತಹ ಮಾದಕ ವಸ್ತುಗಳಿಗೆ ಯುವಕರು ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಛತ್ತೀಸ್‍ಗಢ ರಾಯಭಾಗ್ ಮೂಲದ ನಿವಾಸಿ ನೇಮ್ ಕುಮಾರ್ ಎನ್ನುವ ಯುವಕ ಸೈಕಲ್‍ನಲ್ಲೆ ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ವಿರುದ್ಧ ಅಭಿಯಾನವನ್ನು ಕೈಗೊಂಡಿದ್ದಾರೆ.
ಕಳೆದ 75 ದಿನಗಳ ಹಿಂದೆ ಛತ್ತೀಸ್‍ಗಢ ರಾಯಭಾಗ್‍ನಿಂದ ಸೈಕಲ್ ಮೂಲಕ ತೆರಳಿದ್ದ ನೇಮ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದಿದ್ದ ಅವರು ಬುಧವಾರ ಕುಂದಾಪುರ ತಾಲೂಕನ್ನು ಪ್ರವೇಶ ಮಾಡಿದ್ದಾರೆ.ಈ ಸೈಕಲ್ ಅಭಿಯಾನ ಒಂದು ವರ್ಷಗಳ ಕಾಲ ಮುಂದುವರೆಯಲಿದ್ದು ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಉದ್ದೇಶವಾಗಿದೆ.ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಡ್ರಗ್ಸ್ ಅಭಿಯಾನದ ಅಂಗವಾಗಿ ಸಂವಾದವನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ನಗರಗಳಲ್ಲಿ ಕಂಡು ಬರುತ್ತಿದ್ದ ಡ್ರಗ್ಸ್ ಜಾಲ ಇತ್ತೀಚಿನ ವರ್ಷಗಳಲ್ಲಿ ಕುಂದಾಪುರ,ಬೈಂದೂರು ತಾಲೂಕಿನ ಹಳ್ಳಿಗಳ ಕಡೆಗೂ ವ್ಯಾಪಿಸಿರುವುದು ಆತಂಕದ ವಿಚಾರವಾಗಿದೆ.ಪೆÇಲೀಸ್ ಠಾಣೆಗಳಲ್ಲಿ ಕೇಸ್‍ಗಳು ದಾಖಲಾಗುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕಾಲೇಜು ವಿದ್ಯಾರ್ಥಿಗಳು,ಯುವ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ವ್ಯವಹಾರ ನಡೆಸುತ್ತಿರುವ ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು.ಚಾಕಲೇಟ್ ಸಿಗುವಷ್ಟು ಸುಲಭದಲ್ಲಿ ಗಾಂಜಾ,ಡ್ರಗ್ಸ್‍ನಂತಹ ಮಾದಕ ವಸ್ತುಗಳು ಯುವಕರ ಕೈ ಸೇರುತ್ತಿದೆ.ಹೆಣ್ಣು ಮಕ್ಕಳು ಕೂಡ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಹೆತ್ತವರ ಚಿಂತೆಗೆ ಕಾರಣವಾಗಿದೆ.
ಶೋಕಿ ಜೀವನಕ್ಕೆ ಯುವಕರು ಬಲಿ:ನಶೆಯನ್ನು ಏರಿಸಿಕೊಳ್ಳುವ ಗೀಳಿಗೆ ಬಿದ್ದ ಯುವ ಸಮುದಾಯ ತಮ್ಮ ಜೀವನದ ಸುಂದರ ದಿನಗಳನ್ನು ಕಳೆದುಕೊಳ್ಳುತ್ತಿರುವುದು ಮಾತ್ರವಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನ ಕಂಬಿಗಳನ್ನು ಏಣಿಸಿಸುವುದರ ಜತೆಗೆ ಮಾನಸಿಕ ಖಿನ್ನತೆ ಅಂತಹ ರೋಗಗಳಿಗೆ ತುತ್ತಾಗಿ,ಆತ್ಮಹತ್ಯೆಗಳಂತಹ ಕೃತ್ಯಗಳಿಗೂ ಬಲಿಯಾಗುತ್ತಿದ್ದಾರೆ.ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗ ಬಾರದೆಂದು ಪೊಲೀಸ್ ಇಲಾಖೆ ಮನವಿಯನ್ನು ಮಾಡಿಕೊಳ್ಳುತ್ತಿದೆ.

Advertisement

(ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು:ಶೋಕಿ ಜೀವನಕ್ಕೆ ಯುವ ಸಮುದಾಯ ಬಲಿ)

Advertisement
Advertisement


Share

Leave a comment

Your email address will not be published. Required fields are marked *

You cannot copy content of this page